Publish Date: Thu, 25 Apr 2019 (08:14 IST)
Updated Date: Thu, 25 Apr 2019 (08:16 IST)
ಮುಂಬೈ: ನಿನ್ನೆ 46 ನೇ ಜನ್ಮ ದಿನ ಆಚರಿಸಿಕೊಂಡ ಸಂಭ್ರಮದಲ್ಲಿದ್ದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಗೆ ಬಿಸಿಸಿಐ ಶಾಕ್ ಕೊಟ್ಟಿದೆ.
ಸಚಿನ್ ಮತ್ತು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಗೆ ಸ್ವ ಹಿತಾಸಕ್ತಿ ಹುದ್ದೆ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸ್ವತಂತ್ರ ತನಿಖಾಧಿಕಾರಿ ಡಿಕೆ ಜೈನ್ ಆಕ್ಷೇಪವೆತ್ತಿದ್ದು, ನೋಟಿಸ್ ಜಾರಿ ಮಾಡಿದ್ದಾರೆ.
ಐಪಿಎಲ್ ನಲ್ಲಿ ಖಾಸಗಿ ಫ್ರಾಂಚೈಸಿ ಜತೆಗೆ ಕೆಲಸ ಮಾಡುತ್ತಿರುವ ಜತೆಗೇ ಬಿಸಿಸಿಐನಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿರುವುದಕ್ಕೆ ಡಿಕೆ ಜೈನ್ ಆಕ್ಷೇಪವೆತ್ತಿದ್ದಾರೆ. ಕೆಲವು ದಿನಗಳ ಮೊದಲು ಮಾಜಿ ನಾಯಕ ಸೌರವ್ ಗಂಗೂಲಿಗೂ ಇದೇ ಕಾರಣಕ್ಕೆ ಬಿಸಿಸಿಐ ನೋಟಿಸ್ ಜಾರಿ ಮಾಡಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ