Publish Date: Thu, 02 May 2019 (07:14 IST)
Updated Date: Thu, 02 May 2019 (07:17 IST)
ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿ ಯಶಸ್ವಿಯಾಗಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಂದೊಂದು ದಿನ ಟೀಂ ಇಂಡಿಯಾ ಕೋಚ್ ಆಗುತ್ತಾರೆಯೇ?
ಹೇಗಿದ್ದರೂ ರವಿಶಾಸ್ತ್ರಿ ಅವಧಿ ಮುಗಿಯುತ್ತಿದೆ. ಬಿಸಿಸಿಐ ಹೊಸದಾಗಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುವುದು ಖಚಿತ. ಪಾಂಟಿಂಗ್ ಕೂಡಾ ಭಾರತೀಯ ಹವಾಮಾನಕ್ಕೆ ಒಗ್ಗಿಕೊಂಡಿದ್ದಾರೆ. ಹಾಗಾಗಿ ಅಪಾರ ಅನುಭವವಿರುವ, ಯಶಸ್ವಿ ನಾಯಕನೆನಿಸಿಕೊಂಡಿದ್ದ ಪಾಂಟಿಂಗ್ ಯಾಕೆ ಟೀಂ ಇಂಡಿಯಾ ಕೋಚ್ ಆಗಬಾರದು?
ಈ ಪ್ರಶ್ನೆಗೆ ಮಾಜಿ ನಾಯಕ ಹಾಗೂ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರೂ ಆಗಿರುವ ಸೌರವ್ ಗಂಗೂಲಿ ಉತ್ತರಿಸಿದ್ದಾರೆ. ‘ಅರ್ಹತೆ ಬಗ್ಗೆ ಹೇಳುವುದಾದರೆ ಪಾಂಟಿಂಗ್ ಗೆ ಕೋಚ್ ಆಗುವ ಎಲ್ಲಾ ಅರ್ಹತೆಯೂ ಇದೆ. ಆದರೆ ಅವರು 8-9 ತಿಂಗಳು ತಮ್ಮ ಕುಟುಂಬದವರನ್ನು ಬಿಟ್ಟಿರುತ್ತಾರೆಯೇ ಎಂಬುದು ಪ್ರಶ್ನೆ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ