Select Your Language

Notifications

webdunia
webdunia
webdunia
webdunia

ಐಪಿಎಲ್: ಅಂಕ ಪಟ್ಟಿಯಲ್ಲಿ ಹಿಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಯಶಸ್ಸಿನ ಹಳಿಗೆ ಬಂದಿದ್ದರ ಗುಟ್ಟೇನು?

ಐಪಿಎಲ್
ನವದೆಹಲಿ , ಬುಧವಾರ, 1 ಮೇ 2019 (07:55 IST)
ನವದೆಹಲಿ: ಕಳೆದ ಬಾರಿ ಐಪಿಎಲ್ ನಲ್ಲಿ ಹೆಚ್ಚೇನೂ ಪರಿಣಾಮ ಬೀರಿರದ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಹೊಸ ಹೆಸರಿನೊಂದಿಗೆ, ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿದಿತ್ತು. ಈ ಬಾರಿ ಅಂಕಪಟ್ಟಿಯಲ್ಲೂ ಮುಂದೆ ಬಂದಿರುವುದರ ಗುಟ್ಟೇನು ಗೊತ್ತಾ?


ಇದನ್ನು ಡೆಲ್ಲಿ ತಂಡದ ಸಲಹೆಗಾರ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಸೋಲಿನ ಬಳಿಕವೂ ಧೈರ್ಯ ಕಳೆದುಕೊಳ್ಳದೇ ಮುನ್ನಡೆದಿದ್ದೇ ಈ ಯಶಸ್ಸಿನ ಗುಟ್ಟು ಎಂದಿದ್ದಾರೆ.

ಡೆಲ್ಲಿ ತಂಡದಲ್ಲಿ ಈ ಬಾರಿ ಪ್ರತಿಭಾವಂತರ ದಂಡೇ ಇದ್ದು ಇವರ ಜತೆಗೆ ಕೋಚ್ ಗಳಾಗಿ ರಿಕಿ ಪಾಂಟಿಂಗ್ ಮತ್ತು ಗಂಗೂಲಿ ಇದ್ದಾರೆ. ನಮ್ಮಲ್ಲಿ ಅನುಭವ ಮತ್ತು ಅನನುಭವಿ ಆಟಗಾರರ ಮಿಶ್ರಣವಿದೆ. ಹೀಗಾಗಿ ತಂಡ ಸೋಲಿನಲ್ಲೂ ಧೃತಿಗೆಡದೇ ಮುನ್ನಡೆಯಲು ಸಾಧ್ಯವಾಯಿತು. ಅದೇ ಕಾರಣಕ್ಕೆ ನಾವು ಯಶಸ್ಸು ಗಳಿಸಿದೆವು ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಬೆಂಗಳೂರು ಪ್ಲೇ ಆಫ್ ಕನಸಿಗೆ ನೀರು ಹುಯ್ದ ವರುಣ