Publish Date: Thu, 02 May 2019 (07:10 IST)
Updated Date: Thu, 02 May 2019 (07:13 IST)
ಚೆನ್ನೈ: ನಾಯಕ ಧೋನಿಯ ಆಲ್ ರೌಂಡರ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನ್ನು 80 ರನ್ ಗಳಿಂದ ಸೋಲುಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ 37 ಎಸೆತಗಳಲ್ಲಿ 59 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ಸಿಡಿದ ಧೋನಿ 22 ಎಸೆತಗಳಲ್ಲಿ 44 ರನ್ ಗಳಿಸಿ ಮೊತ್ತ ಉಬ್ಬಲು ನೆರವಾದರು.
ಈ ಮೊತ್ತ ಬೆನ್ನತ್ತಿದ ಡೆಲ್ಲಿ ಧೋನಿಯ ಎರಡು ಮಿಂಚಿಂಗ್ ಸ್ಟಂಪಿಂಗ್ ಗೆ ಕುಸಿಯಿತು. ಅಲ್ಲದೆ ಸ್ಪಿನ್ನರ್ ಗಳಾದ ಇಮ್ರಾನ್ ತಾಹಿರ್ (4 ವಿಕೆಟ್), ರವೀಂದ್ರ ಜಡೇಜಾ (3 ವಿಕೆಟ್) ಕಬಳಿಸಿ ಎದುರಾಳಿಗಳನ್ನು 16.2 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಮಾಡಿದರು. ಇದರಿಂದಾಗಿ ಚೆನ್ನೈ ಪ್ರಬಲ ಡೆಲ್ಲಿ ವಿರುದ್ಧ 80 ರನ್ ಗಳ ಭರ್ಜರಿ ಜಯ ದಾಖಲಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ