Publish Date: Tue, 30 Apr 2019 (18:06 IST)
Updated Date: Tue, 30 Apr 2019 (18:09 IST)
ಬೇಸಿಗೆಯ ವಿಪರೀತ ಸೆಖೆಗೆ, ತಾಪಕ್ಕೆ ಹೆದರುವ ಜನರು ತಮ್ಮ ಮನೆಗಳ ಮಹಡಿ ಮೇಲೆ ಮಲಗಿಕೊಳ್ಳುತ್ತಿದ್ದಾರೆ. ಆದರೆ ಆಗಬಾರದ ಅನಾಹುತಗಳು ಸಂಭವಿಸುತ್ತಿವೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮನೆ ಹಾಗೂ ಅಂಗಡಿಗಳ ಸರಣಿ ಕಳ್ಳತನವಾಗಿವೆ.
ಆರು ಮನೆಗಳು ಹಾಗೂ ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಲಾಗಿದೆ.
ಬೇಸಿಗೆ ಹಿನ್ನೆಲೆ ಮನೆಯ ಮೇಲ್ಛಾವಣಿ ಮೇಲೆ ಕುಟುಂಬದ ಸದಸ್ಯರು ಮಲಗಿದ್ದ ವೇಳೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ಮನೆಗಳಲ್ಲಿನ ಚಿನ್ನಾಭರಣ, ಅಂಗಡಿಗಳಲ್ಲಿನ ನಗದು ದೋಚಿ ಪರಾರಿಯಾಗಿದ್ದಾರೆ ಕಳ್ಳರು. ಈ ಕುರಿತು ಕಲಕೇರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.