ಮುದ್ದು ಮಕ್ಕಳ ಆಹಾರಕ್ಕೆ ಕನ್ನ

ಶುಕ್ರವಾರ, 26 ಏಪ್ರಿಲ್ 2019 (15:16 IST)
ಅಂಗನವಾಡಿ ಎಂದರೆ ಅಲ್ಲಿ ಪುಟ್ಟ ಮಕ್ಕಳು ಕಲಿಕೆಯ ತಾಣವಾಗಿರುತ್ತದೆ. ಆದರೆ ದುರುಳರು ಮಕ್ಕಳು ತಿನ್ನು ಆಹಾರಕ್ಕೆ ಕನ್ನ ಹಾಕಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಕನ್ನ ಹಾಕಿರುವ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಘಟನೆ.

ಮಕ್ಕಳ ಆಹಾರ ಸಾಮಾಗ್ರಿ ಸೇರಿದಂತೆ ಗ್ಯಾಸ್ ಸಿಲಿಂಡರ್ ಕಳವು ಮಾಡಲಾಗಿದೆ. ಕಳ್ಳರು ಸಿಲಿಂಡರ್, ಅಕ್ಕಿ, ಬೇಳೆ ಕಾಳುಗಳು, ಹೆಸರು ಕಾಳು, ಎಣ್ಣೆ ಇನ್ನು ಮುಂತಾದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ತಡರಾತ್ರಿ ಅಂಗನವಾಡಿಯ ಬೀಗವನ್ನು ಮುರಿದು ಕಳ್ಳತನ ಮಾಡಲಾಗಿದೆ. KRS ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಪ್ರಕರಣ ದಾಖಲಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶೃತಿ ಬೆಳ್ಳಕ್ಕಿಗೆ ಸಿಕ್ತು ಜಾಮೀನು