Select Your Language

Notifications

webdunia
webdunia
webdunia
webdunia

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಗ್ಯಾಂಗ್
ಪೋಷಕರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯೊಂದಕ್ಕೆ ನುಗ್ಗಿದ ಐವರು ಕಾಮುಕರು ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ ಮನೆಯಲ್ಲಿದ್ದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಛತ್ತೀಸಗಢದ ರಾಯಘಡದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. 15 ವರ್ಷದ ಬಾಲಕಿ ಹಾಗೂ ಆಕೆಯ ಸಹೋದರಿ ಮನೆಯಲ್ಲಿದ್ದರು. ಹುಡುಗಿಯರ ಪೋಷಕರು ಹೊಲಕ್ಕೆ ಬೆಳೆ ಕಾಯಲು ಹೋಗಿದ್ದರು.

ಈ ಸಂದರ್ಭವನ್ನೇ ಉಪಯೋಗಿಸಿಕೊಂಡ ಐವರು ಕಾಮುಕರು ಮನೆಗೆ ನುಗ್ಗಿ 15 ರ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸಂತ್ರಸ್ಥೆಯ ತಂಗಿ ತಪ್ಪಿಸಿಕೊಂಡು ಹೋಗಿ ಪೋಷಕರಿಗೆ ವಿಷಯ ಮುಟ್ಟಿಸಿದ್ದಾಳೆ. ಪೋಷಕರು ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

2 ಕೋಟಿ ಹಣ ಎಲ್ಲಿತ್ತು ಗೊತ್ತಾ? ಶಾಕಿಂಗ್