Select Your Language

Notifications

webdunia
webdunia
webdunia
webdunia

ತಾಯಿಯ ಎದುರೇ ಪುತ್ರಿಯ ಮೇಲೆ ಗ್ಯಾಂಗ್‌ರೇಪ್

ತಾಯಿಯ ಎದುರೇ ಪುತ್ರಿಯ ಮೇಲೆ ಗ್ಯಾಂಗ್‌ರೇಪ್
ಮುಜಾಫರ್‌ನಗರ್ , ಸೋಮವಾರ, 15 ಏಪ್ರಿಲ್ 2019 (15:52 IST)
ಹೆತ್ತ ತಾಯಿಯ ಎದುರೇ ಪುತ್ರಿಯ ಮೇಲೆ ಇಬ್ಬರು ಆರೋಪಿಗಳು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ಜಿಲ್ಲೆಯ ಕಕ್ರೌಲಿ ಪ್ರದೇಶದಲ್ಲಿ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಕ್ರೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮೆಡಿಕಲ್ ಅಂಗಡಿಗೆ ಔಷಧಿ ತರಲು ತಾಯಿಯೊಂದಿಗೆ ಪುತ್ರಿ ತೆರಳಿದ್ದಾಗ ದಾರುಣ ಘಟನೆ ಸಂಭವಿಸಿದೆ.
 
ಆರೋಪಿ ದಿಲ್‌ಶಾದ್‌ನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಅಪರಿಚಿತ ಆರೋಪಿಯ ಪತ್ತೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಅತ್ಯಾಚಾರಕ್ಕೊಳಗಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
 
ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ರೇಪ್‌ಗೊಳಗಾದ ಯುವತಿಯ ತಂದೆ, ಪತ್ನಿ ಮತ್ತು ಪುತ್ರಿ ಔಷಧಿ ತರಲು ಮೆಡಿಕಲ್ ಶಾಪ್‌ಗೆ ತೆರಳಿದ್ದಾಗ ಆರೋಪಿಗಳು ಇಬ್ಬರನ್ನು ಒತ್ತಾಯಪೂರ್ವಕವಾಗಿ ಕಬ್ಬಿನ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಡಿ.ಕೆ.ಸುರೇಶ್ ಮಾಡಿದ್ದೇನು?