Publish Date: Mon, 15 Apr 2019 (15:14 IST)
Updated Date: Mon, 15 Apr 2019 (15:16 IST)
ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿಯಿಂದ ಭರ್ಜರಿ ಪ್ರಚಾರ ನಡೆದಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಿಂದ ಭರ್ಜರಿ ಪ್ರಚಾರ ನಡೆಸಲಾಗುತ್ತಿದೆ. ಬನ್ನೇರುಘಟ್ಟದಿಂದ ಪ್ರಚಾರ ಆರಂಭಿಸಿರುವ ಡಿಕೆ ಸುರೇಶ್ ಗೆ ಪಕ್ಷದ ಪ್ರಮುಖರು ಸಾಥ್ ನೀಡಿದ್ದಾರೆ.
ಬನ್ನೇರುಘಟ್ಟ ಚಂಪಕಧಾಮಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಶುರು ಮಾಡಿದ್ರು.
ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕಿ ಡಿ.ಕೆ. ಸುರೇಶ್ ಅವರನ್ನು ಸ್ವಾಗತ ಮಾಡಿಕೊಂಡ ಮುಖಂಡರು ಹಾಗೂ ಕಾರ್ಯಕರ್ತರು ಅಭ್ಯರ್ಥಿ ಪರ ಘೋಷಣೆ ಕೂಗಿದರು.
ಬೆಂಗಳೂರು ಗ್ರಾಮಾಂತರದ ಬನ್ನೇರುಘಟ್ಟ, ಜಿಗಣಿ, ರಾಗಿಹಳ್ಳಿ ಸೇರಿದಂತೆ ಹಲವು ಕಡೆ ಬಿರುಸಿನ ಪ್ರಚಾರ ನಡೆಸಿದ್ರು.