Publish Date: Mon, 15 Apr 2019 (15:09 IST)
Updated Date: Mon, 15 Apr 2019 (15:11 IST)
ಪಕ್ಷೇತರ ಅಭ್ಯರ್ಥಿ ಪರ ಪ್ರಚಾರದಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್ ಮೇಲೆ ಐಟಿ ದಾಳಿ ನಡೆದಿದೆ.
ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಭರ್ಜರಿ ಪ್ರಚಾರದಲ್ಲಿ ನಟ ದರ್ಶನ್ ತೊಡಗಿಕೊಂಡಿದ್ದಾರೆ.
ಮೈಸೂರು ಟಿ. ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಪಾರಂ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಇಂದು ದರ್ಶನ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಅರಳಕುಪ್ಪೆ, ಕ್ಯಾತನಹಳ್ಳಿ, ಕೆನ್ನಾಳು, ಚಿಕ್ಕಾಡೆ, ದುದ್ದ, ಶಿವಳ್ಳಿ, ಚಂದಗಾಲು ಸೇರಿ 20 ಹಳ್ಳಿಗಳಿಗೆ ಪ್ರಚಾರ ಕೈಗೊಂಡಿದ್ದಾರೆ.
Jagadeesh
Publish Date: Mon, 15 Apr 2019 (15:09 IST)
Updated Date: Mon, 15 Apr 2019 (15:11 IST)