Publish Date: Mon, 15 Apr 2019 (14:37 IST)
Updated Date: Mon, 15 Apr 2019 (14:40 IST)
ಸದಾ ಸುದ್ದಿಯಲ್ಲಿರುವ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ನಸುನಿಕ ಜಾವದಲ್ಲಿ ಮಲ್ಪೆ ಬಂದಿರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣಾ ಪ್ರಯುಕ್ತ ಉಡುಪಿ ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಲ್ಪೆ ಬಂದರಿಗೆ ಭೇಟಿ ನೀಡಿದ್ದಾರೆ.
ಶಾಸಕರಾದ ಕೆ. ರಘುಪತಿ ಭಟ್ ಹಾಗೂ ಲಾಲಾಜಿ ಮೆಂಡನ್ ಸಾಥ್ ನೀಡಿದ್ರು. ಮಲ್ಪೆ ಮೀನುಗಾರರ ಬಳಿ ಮತಯಾಚನೆ ನಡೆಸಲಾಯಿತು. ಬೆಳಿಗ್ಗೆ 5:30 ಯಿಂದಲೇ ಸಭೆ ನಡೆಸಲಾಗಿದ್ದು, ಸುಮಾರು 200 ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮೀನುಗಾರರು ಸೇರಿದ್ದರು.
ಪ್ರಚಾರಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದ್ದು ನರೇಂದ್ರ ಮೋದಿಯವರ ಕೈ ಬಲಪಡಿಸುವ ಸಲುವಾಗಿ ನಾವೆಲ್ಲರೂ ಬಿಜೆಪಿಯ ಪರವಾಗಿ ನಿಲ್ಲುತ್ತೇವೆ ಎಂದು ಮೀನುಗಾರರು ಒಕ್ಕೊರಲಿನಿಂದ ಹೇಳಿಕೊಂಡಿದ್ದಾರೆ. ಬಿಜೆಪಿ ಮುಖಂಡರು, ನಗರಸಭೆ ಸದಸ್ಯರು, ವಿವಿಧ ಸ್ಥಳೀಯ ಮೀನುಗಾರರ ಮುಖಂಡರು, ಕಾರ್ಯಕರ್ತರಿದ್ರು.