Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರೇ ನನ್ನ ನಾಯಕ ಎಂದ ಬಿಜೆಪಿ ಅಭ್ಯರ್ಥಿ ಯಾರು ಗೊತ್ತಾ?

ಹಾಸನ
ಹಾಸನ , ಸೋಮವಾರ, 15 ಏಪ್ರಿಲ್ 2019 (09:27 IST)
ಹಾಸನ : ಈಗಲೂ ಸಿದ್ದರಾಮಯ್ಯನವರೇ ನನ್ನ ನಾಯಕ ಎಂದು ಹೇಳುವುದರ ಮೂಲಕ ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎ. ಮಂಜು, ಬಿಜೆಪಿ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ.


ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಎ. ಮಂಜು, ಬೆಳೆದು ಬಂದ ದಾರಿಯನ್ನು ಮರೆಯುವವನು ನಾನಲ್ಲ. ಕಾಂಗ್ರೆಸ್ ತೊರೆದು ನಾನು ಬಿಜೆಪಿ ಸೇರ್ಪಡೆಗೊಂಡಿದ್ದರೂ ನನ್ನ ರಾಜಕೀಯ ಗುರು ಹಾಗು ಹಿತೈಷಿ ಸಿದ್ದರಾಮಯ್ಯನವರೇ. ಈಗಲೂ ಸಿದ್ದರಾಮಯ್ಯನವರೇ ನನ್ನ ನಾಯಕ ಎಂದು ಘೋಷಿಸಿದ್ದಾರೆ.


ಸಿದ್ದರಾಮಯ್ಯನವರು ಪಕ್ಷ ತೊರೆಯದಂತೆ ಮನವೊಲಿಸಲು ಯತ್ನಿಸಿದ್ದು ನಿಜ. ಆದರೆ ಹಾಸನ ಜಿಲ್ಲಾ ಕಾರ್ಯಕರ್ತರನ್ನು ಸಂಕಷ್ಟಕ್ಕೆ ಸಿಲುಕಿಸಬಾರದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ. ಹಾಗೇ ಕೇಂದ್ರದಲ್ಲಿ ಈ ಬಾರಿಯೂ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಟನ್ ನಲ್ಲಿ ಪಾನ್ ತಿಂದು ಎಲ್ಲೆಂದರಲ್ಲಿ ಉಗಿಯುವವರಿಗೊಂದು ಶಾಕಿಂಗ್ ನ್ಯೂಸ್