Publish Date: Mon, 15 Apr 2019 (14:32 IST)
Updated Date: Mon, 15 Apr 2019 (14:34 IST)
ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರದ ಅಬ್ಬರ ತೀವ್ರಗೊಳಿಸಿದ್ದಾರೆ.
ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿ ಪ್ರಚಾರದ ಅಬ್ಬರ ಜೋರಾಗಿದೆ. ಕೆ.ಆರ್.ನಗರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ನಡೆಸಿದ್ರು.
ಮಾರಗೌಡನಹಳ್ಳಿ, ಆಡಗೂರು, ಹನುಮನಹಳ್ಳಿ, ಬೇರ್ಯ, ಸಕ್ಕರೆ ಸೇರಿ 30 ಕಡೆ ಸುಮಲತಾ ಪ್ರಚಾರ ನಡೆಸಿದ್ರು.
ಮೇಲುಕೋಟೆ ಕ್ಷೇತ್ರದಲ್ಲಿ ನಟ ದರ್ಶನ್ ರೋಡ್ ಷೋ ನಡೆಸಿದ್ರು.
ಇನ್ನು ಅರಳಕುಪ್ಪೆ, ಕ್ಯಾತನಹಳ್ಳಿ, ಕೆನ್ನಾಳು, ಚಿಕ್ಕಾಡೆ, ದುದ್ದ, ಶಿವಳ್ಳಿ, ಚಂದಗಾಲು ಸೇರಿ 20 ಹಳ್ಳಿಗಳಿಗೆ ಡಿ ಬಾಸ್ ಭೇಟಿ ನೀಡಿದ್ರು.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಿದ್ರು. ಆನಸೋಸಲು, ಚಿಕ್ಕಬಳ್ಳಿ, ಮೋಳೆ, ಬಸರಾಳು, ಗೌಡಗೆರೆ ಸೇರಿ 20 ಹಳ್ಳಿಗಳಿಗೆ ಯಶ್ ಭೇಟಿ ನೀಡಿದ್ರು. ಮಳವಳ್ಳಿ ಮತ್ತು ಮಂಡ್ಯ ನಗರದಲ್ಲಿ ಅಂಬಿ ಪುತ್ರ, ನಟ ಅಭಿಷೇಕ್ ಅಂಬರೀಶ್ ರೋಡ್ ಷೋ ನಡೆಸಿದ್ರು.