Select Your Language

Notifications

webdunia
webdunia
webdunia
webdunia

ಸಣ್ಣ ಸಮುದಾಯಗಳ ಓಲೈಕೆಗೆ ಮುಂದಾದ ಹೆಚ್.ಡಿ.ಡಿ

ದೇವೇಗೌಡ
ತುಮಕೂರು , ಸೋಮವಾರ, 15 ಏಪ್ರಿಲ್ 2019 (14:57 IST)
ರಾಜಕೀಯ ಜೀವನದಲ್ಲಿ ನಾನು ಹುಟ್ಟು ಹೋರಾಟಗಾರ. ನಿಮ್ಮನ್ನೆಲ್ಲ ಮುಂದೆ ತೆಗೆದುಕೊಂಡು ಹೋಗುವ ಆತ್ಮವಿಶ್ವಾಸವಿದೆ. ಹೀಗಂತ ಮಾಜಿ ಪ್ರಧಾನಿ ಹಾಗೂ ತುಮಕೂರಿನ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ತುಮಕೂರಿನಲ್ಲಿ ಮಡಿವಾಳ ಜನಾಂಗದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ನಾಯಕರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ‌ ಸ್ಪರ್ಧಿಸುತ್ತಿದ್ದೇನೆ. ತುಮಕೂರಿನಲ್ಲಿ ನಾನು ನೋಡಿದ ಹಾಗೆ 29 ಸಣ್ಣ ಸಣ್ಣ ಸಮುದಾಯಗಳಿವೆ. ಹಿಂದುಳಿದವರು, 21 ಸಣ್ಣಜಾತಿಗಳಿಗೆ  ಗ್ರಾಮಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಗಳಲ್ಲಿ ರಿಸರ್ವೇಶನ್ ತಂದಿದ್ದು ಯಾರು..? ಎಂದು ಕೇಳಿದ್ರು.

ದೈವದ ಆಟ ಎಲ್ಲರನ್ನು ಮುಂದೆ ತೆಗೆದುಕೊಂಡು ಹೋಗುತ್ತೇನೆ. 5 ವರ್ಷದಲ್ಲಿ  ಈ ಜಿಲ್ಲೆಯ ಋಣ ತೀರಿಸಿ ಹೋಗುತ್ತೇನೆ. ಸಿದ್ದರಾಮಯ್ಯ ನಾನು ಒಗ್ಗಾಟ್ಟಾಗಿ ದುಡಿಯುತ್ತಿದ್ದೇವೆ. ನಿಮಗೆ ಯಾವುದೇ ಸಂಶಯ ಬೇಡ ನಾನು ಕೆಲಸ ಮಾಡುತ್ತೇನೆ ಎಂದರು. ನಾಳೆ ನಾಡಿದ್ದು ಇಲ್ಲೆ ಇರತ್ತೇನೆ. ಯಾವ ಆರೋಪಗಳಿಗೆ ಕಿವಿಕೊಡಬೇಡಿ.

ಎಲ್ಲಾರು ನನ್ನ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವರು ಬೇಕಿದ್ರೆ ನನ್ನ ಸೋಲಿಸಲಿ ಎಂದ ಸಂಸದ