Select Your Language

Notifications

webdunia
webdunia
webdunia
webdunia

ಪುತ್ರಿಯ ಸಿನಿಮಾದಲ್ಲಿ ಮೂಗು ತೂರಿಸಿದ್ದಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿಗೆ ವಾರ್ನಿಂಗ್!

ಪುತ್ರಿಯ ಸಿನಿಮಾದಲ್ಲಿ ಮೂಗು ತೂರಿಸಿದ್ದಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿಗೆ ವಾರ್ನಿಂಗ್!
ಮುಂಬೈ , ಶನಿವಾರ, 6 ಏಪ್ರಿಲ್ 2019 (09:12 IST)
ಮುಂಬೈ: ಪುತ್ರಿ ಆತಿಥ್ಯ ಶೆಟ್ಟಿ ಅಭಿನಯಿಸುತ್ತಿರುವ ಸಿನಿಮಾದ ನಿರ್ಮಾಣ ವಿಚಾರದಲ್ಲಿ ಮೂಗು ತೂರಿಸಿದ್ದಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ವಿರುದ್ಧ ನಿರ್ಮಾಪಕರು ಸಿಡಿದೆದ್ದಿದ್ದಾರೆ.


ಪುತ್ರಿ ಆತಿಥ್ಯ ಅಭಿನಯಿಸುತ್ತಿರುವ ‘ಮೋಟಿ ಚೋರ್ ಚಕ್ನಾಚೋರ್’ ಸಿನಿಮಾದಲ್ಲಿ ಅನವಶ್ಯಕವಾಗಿ ತಲೆ ಹಾಕಿದ್ದಕ್ಕೆ ಸುನಿಲ್ ಶೆಟ್ಟಿಗೆ ಲೀಗಲ್ ನೋಟಿಸ್ ನೀಡಿರುವವ ನಿರ್ಮಾಪಕರಾದ ರಾಜೇಶ್ ಮತ್ತು ಕಿರಣ್ ಭಾಟಿಯಾ ನಮ್ಮ ಸಿನಿಮಾ ವಿಚಾರದಲ್ಲಿ ನಮ್ಮದೇ ಅಂತಿಮ ತೀರ್ಮಾನ ಎಂದು ಫರ್ಮಾನು ಹೊರಡಿಸಿದ್ದಾರೆ.

ಈ ಸಿನಿಮಾ ವಿಚಾರವಾಗಿ ಸಿನಿಮಾಕ್ಕೆ ಸಂಬಂಧಪಟ್ಟ ಯಾರೊಂದಿಗೇ ಆದರೂ ಚರ್ಚಿಸುವುದು, ಒಪ್ಪಂದ ಮಾಡಿಕೊಳ್ಳುವುದು, ಒತ್ತಡ ಹೇರುವುದು ಇತ್ಯಾದಿ ಮಾಡಿದಲ್ಲಿ ಸುನಿಲ್ ಶೆಟ್ಟಿ ವಿರುದ್ಧ ತಕ್ಕ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನವೂ ರಶ್ಮಿಕಾ ಮಂದಣ್ಣಗೆ ಮತ್ತೆ ‘ಅದನ್ನೇ’ ನೆನಪಿಸಿದ ವಿಜಯ್ ದೇವರಕೊಂಡ