Publish Date: Wed, 03 Apr 2019 (10:31 IST)
Updated Date: Wed, 03 Apr 2019 (10:33 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್ ವಿಚ್ಛೇದನವಾಗುತ್ತಿರುವ ಬಗ್ಗೆ ಮ್ಯಾಗಜಿನ್ ಒಂದು ವರದಿ ಮಾಡಿ ಇದೀಗ ಸಂಕಷ್ಟಕ್ಕೀಡಾಗಿದೆ.
ಓಕೆ ಮ್ಯಾಗಜಿನ್ ಇಬ್ಬರ ನಡುವೆ ವಿಚ್ಛೇದನವಾಗುತ್ತಿದೆ ಎಂದು ಸುದ್ದಿ ಪ್ರಕಟಿಸಿದೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಆಧಾರ ರಹಿತವಾಗಿದೆ ಎಂದು ಪ್ರಿಯಾಂಕಾ-ನಿಕ್ ತಳ್ಳಿ ಹಾಕಿದ್ದಾರೆ. ಅಲ್ಲದೆ, ಇಂತಹ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಮ್ಯಾಗಜಿನ್ ವಿರುದ್ಧ ತಿರುಗಿಬಿದ್ದಿದ್ದಾರೆ.
ಈ ರೀತಿಯ ಸುದ್ದಿ ಪ್ರಕಟಿಸಿದ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ಕಾನೂನು ಸಮರಕ್ಕೆ ಪ್ರಿಯಾಂಕಾ ದಂಪತಿ ಮುಂದಾಗಿದ್ದಾರೆ. ಈಗಾಗಲೇ ತಮ್ಮ ಕಾನೂನು ತಜ್ಞರ ತಂಡದ ಜತೆಗೆ ಈ ಬಗ್ಗೆ ಪ್ರಿಯಾಂಕಾ ಚರ್ಚೆ ನಡೆಸಿದ್ದಾರಂತೆ. ಈ ರೀತಿಯ ಸುಳ್ಳು ಸುದ್ದಿ ಪ್ರಕಟಿಸಿದ ಪತ್ರಿಕೆ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುವಂತೆ ಮಾಡದೇ ಪ್ರಿಯಾಂಕಾ ಬಿಡಲ್ಲ ಎಂದು ಆಕೆಯ ಸಮೀಪವರ್ತಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ