Select Your Language

Notifications

webdunia
webdunia
webdunia
webdunia

ಒಳ ಉಡುಪು ಧರಿಸುತ್ತಾರೋ ಬಿಡುತ್ತಾರೋ ನಾನ್ಯಾಕೆ ನೋಡಲಿ? ಕಂಗನಾ ರನೌತ್ ಗೆ ತಿರುಗೇಟು ನೀಡಿದ ಪಹ್ಲಾಜ್ ನಿಹ್ಲಾನಿ

ಒಳ ಉಡುಪು ಧರಿಸುತ್ತಾರೋ ಬಿಡುತ್ತಾರೋ ನಾನ್ಯಾಕೆ ನೋಡಲಿ? ಕಂಗನಾ ರನೌತ್ ಗೆ ತಿರುಗೇಟು ನೀಡಿದ ಪಹ್ಲಾಜ್ ನಿಹ್ಲಾನಿ
ಮುಂಬೈ , ಶನಿವಾರ, 30 ಮಾರ್ಚ್ 2019 (09:16 IST)
ಮುಂಬೈ: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಕಂಗನಾ ರನೌತ್ ನಿರ್ದೇಶಕ ಪಹ್ಲಾಜ್ ನಿಹ್ಲಾನಿ ವಿರುದ್ಧ ಮಾಡಿದ್ದ ಗಂಭೀರ ಆರೋಪಕ್ಕೆ ಅವರು ತಿರುಗೇಟು ನೀಡಿದ್ದಾರೆ.


‘ಐ ಲವ್ ಯೂ ಬಾಸ್’ ಎನ್ನುವ ಸಿನಿಮಾ ಫೋಟೋ ಶೂಟ್ ಸಂದರ್ಭದಲ್ಲಿ ಒಳ ಉಡುಪು ಹಾಕದೇ ಬೋಲ್ಡ್ ಡ್ರೆಸ್ ಹಾಕಿ ತೀರಾ ಅಶ್ಲೀಲ ಎನಿಸುವ ಸನ್ನಿವೇಶದಲ್ಲಿ ನಟಿಸುವಂತೆ ನನಗೆ ಒತ್ತಾಯಿಸಿದ್ದರು ಎಂದು ಕಂಗನಾ ಹೇಳಿಕೊಂಡಿದ್ದರು.

ಆದರೆ ಇದಕ್ಕೆ ತಿರುಗೇಟು ನೀಡಿರುವ ಪಹ್ಲಾಜ್ ‘ಕಂಗನಾ ಅಂದರೆ ಯಾರು ಎಂದೇ ಗೊತ್ತಿಲ್ಲದಿರುವಾಗ ಆಕೆಗೆ ಮೂರು ಸಿನಿಮಾಗಳಲ್ಲಿ ಅವಕಾಶ ನೀಡಿ ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು. ಆಕೆ ಹೇಳಿದ ಸಿನಿಮಾ ಕತೆಯನ್ನು ಮೊದಲೇ ಆಕೆಗೆ ವಿವರಿಸಲಾಗಿತ್ತು. ಆದರೆ ಫೋಟೋ ಶೂಟ್ ನಡೆಯುವಾಗ ಒಳಉಡುಪು ಧರಿಸಬಾರದು ಎಂದೆಲ್ಲಾ ನಾನು ಹೇಳಿಲ್ಲ. ನೀವು ಒಳ ಉಡುಪು ಧರಿಸಿದರೆಷ್ಟು, ಬಿಟ್ಟರೆಷ್ಟು ಅದನ್ನು ಕಟ್ಟಿಕೊಂಡು ನಾನು ಏನು ಮಾಡಲಿ? ಅಷ್ಟಕ್ಕೂ ಆ ಫೋಟೋ ಶೂಟ್ ಸಂದರ್ಭ ನಾನು ಅಲ್ಲಿ ಇರಲೇ ಇಲ್ಲ. ಇದೆಲ್ಲಾ ಕಂಗನಾ ಹಣೆಯುತ್ತಿರುವ ಕಟ್ಟು ಕತೆ’ ಎಂದು ಪಹ್ಲಾಜ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕಿಂಗ್ ನ್ಯೂಸ್ ಕೊಡ್ತೀನಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು ಇದನ್ನು!