Publish Date: Fri, 05 Apr 2019 (09:17 IST)
Updated Date: Fri, 05 Apr 2019 (09:19 IST)
ಮುಂಬೈ: ಬಾಲಿವುಡ್ ನ ಮೋಸ್ಟ್ ಹ್ಯಾಪಿ ಫ್ಯಾಮಿಲಿ ಪೈಕಿ ನಟ ಅಕ್ಷಯ್ ಕುಮಾರ್- ಟ್ವಿಂಕಲ್ ಖನ್ನಾ ಕುಟುಂಬವೂ ಒಂದು. ಈ ದಂಪತಿಯ ಪ್ರೇಮದ ಫಲವಾಗಿ ಇಬ್ಬರು ಮಕ್ಕಳೂ ಇದ್ದಾರೆ.
ಇದೀಗ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ತಮ್ಮ ವೈಯಕ್ತಿಕ ಬದುಕಿನ ರಹಸ್ಯವನ್ನು ಟ್ವಿಂಕಲ್ ಬಿಚ್ಚಿಟ್ಟಿದ್ದಾರೆ. ಮದುವೆಗೂ ಮುನ್ನ ಅಕ್ಷಯ್ ಆರೋಗ್ಯವಂತ ಕುಟುಂಬದಿಂದ ಬಂದಿದ್ದಾರಾ ಎಂದು ಟ್ವಿಂಕಲ್ ಸರಿಯಾಗಿಯೇ ವಿಚಾರಿಸಿಕೊಂಡಿದ್ದರಂತೆ.
ಇನ್ನು ಮದುವೆಯಾದ ಬಳಿಕ ಒಂದು ವಿಚಾರಕ್ಕೆ ಸದಾ ಅಕ್ಷಯ್ ರನ್ನು ಬೆದರಿಸುತ್ತಲೇ ಇದ್ದರಂತೆ ಟ್ವಿಂಕಲ್. ಅದೇನೆಂದರೆ ನೀನು ಯಾವತ್ತಾದರೂ ಅರ್ಥವಿಲ್ಲದ ಅಸಂಬದ್ಧ ಸಿನಿಮಾ ಮಾಡಿದರೆ ನಾನು ಎರಡನೇ ಮಗು ಮಾಡ್ಕೊಳ್ಳೋಕೆ ಒಪ್ಪೋದಿಲ್ಲ ಎಂದು ಟ್ವಿಂಕಲ್ ಬೆದರಿಕೆ ಹಾಕುತ್ತಲೇ ಇದ್ದರಂತೆ! ಅದಕ್ಕೇ ಏನೋ ಅಕ್ಷಯ್ ಹೆಚ್ಚಾಗಿ ಸಾಮಾಜಿಕ ಸಂದೇಶವಿರುವ ಸದಬಿರುಚಿಯ ಸಿನಿಮಾಗಳನ್ನೇ ಮಾಡುತ್ತಾರೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ