Select Your Language

Notifications

webdunia
webdunia
webdunia
webdunia

ಬರ್ತ್ ಡೇ ದಿನವೂ ರಶ್ಮಿಕಾ ಮಂದಣ್ಣಗೆ ಮತ್ತೆ ‘ಅದನ್ನೇ’ ನೆನಪಿಸಿದ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (10:50 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಇಂದು ಜನ್ಮ ದಿನದ ಸಂಭ್ರಮ. ಜನ್ಮ ದಿನಕ್ಕೆ ರಶ್ಮಿಕಾಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ. ಅದರಲ್ಲಿ ವಿಜಯ್ ದೇವರಕೊಂಡ ಕೂಡಾ ಒಬ್ಬರು.


ಗೀತ ಗೋವಿಂದಂ ಜೋಡಿ ವಿಜಯ್ ದೇವರಕೊಂಡ ಈಗ ರಶ್ಮಿಕಾ ಜತೆಗೆ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ಜೋಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಜತೆಗೆ ಲಿಪ್ ಲಾಕ್ ಮಾಡುವ ದೃಶ್ಯವೊಂದು ಇದ್ದ ಟೀಸರ್ ಬಿಡುಗಡೆಯಾಗಿ ವೈರಲ್ ಆಗಿತ್ತು. ರಶ್ಮಿಕಾಗೆ ಹಲವರು ಮತ್ತೆ ಲಿಪ್ ಲಾಕ್ ಮಾಡಿದ್ದಕ್ಕೆ ಟೀಕೆಯನ್ನೂ ಮಾಡಿದ್ದರು.

ಇದೀಗ ಬರ್ತ್ ಡೇ ದಿನವೂ ವಿಜಯ್ ಮತ್ತೆ ಅದನ್ನೇ ನೆನಪಿಸಿದ್ದಾರೆ. ರಶ್ಮಿಕಾಗೆ ಹ್ಯಾಪಿ ಬರ್ತ್ ಡೇ ಹೇಳಿದ ವಿಜಯ್ ಅದೇ ಟೀಸರ್ ನ ಎಡಿಟೆಡ್ ವರ್ಷನ್ ಒಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ವಿಜಯ್ ಬದಲಿಗೆ ಬೇರೊಬ್ಬ ಹುಡುಗ ರಶ್ಮಿಕಾಗೆ ಲಿಪ್ ಲಾಕ್ ಮಾಡುವಂತೆ ತೋರಿಸಿದ್ದಾರೆ.

ಇದನ್ನು ನೋಡಿ ರಶ್ಮಿಕಾ ಪ್ರತಿಕ್ರಿಯಿಸಿದ್ದು, ನೀನು ನನ್ನ ಅಭಿಮಾನಿಗಳಿಗೆ ಹೃದಯಾಘಾತವಾಗುವಂತೆ ಮಾಡಿದೆ ಎಂದು ಲೇವಡಿ ಮಾಡಿದ್ದಾರೆ.  ರಶ್ಮಿಕಾ ಆಕ್ಷೇಪ ನೋಡಿ ರಿಪ್ಲೈ ಮಾಡಿರುವ ವಿಜಯ್ ರಶ್ಮಿಕಾರನ್ನು ಸಮಾಧಾನಿಸಿದ್ದಾರೆ. ‘ಡಿಯರ್ ಲಿಲ್ಲಿ, ನಾವು ತಮಾಷೆ ಮಾಡಿದೆವು ಅಷ್ಟೆ. ನಮ್ಮ ಮೇಲೆ ಕೋಪಗೊಳ್ಳಬೇಡಿ. ನೀನು ನಮ್ಮ ಸೆಟ್‍ ನ ನಗು, ನಿನ್ನ ಅಭಿನಯದಿಂದ ನಮ್ಮ ಕಣ್ಣಲ್ಲಿ ನೀರು ತರಿಸುವೆ. ನಗುತ್ತಾ ಇರು. ಇದೇ ತಿಂಗಳು 8 ನೇ ತಾರೀಖಿಗೆ ಒಂದು ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಅದು ಕೇವಲ ನಿನಗೋಸ್ಕರ’ ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಹೆಸರು ಹೇಳ್ರೀ ಬೇಗ..! ರಾಧಿಕಾ ಪಂಡಿತ್ ಗೆ ಅಭಿಮಾನಿಗಳ ಒತ್ತಾಯ