Select Your Language

Notifications

webdunia
webdunia
webdunia
webdunia

ಸುದೀಪ್ ‘ಹೆಬ್ಬುಲಿ’ ನಾಯಕಿ ಅಮಲಾ ಪೌಲ್ ಈಗ ನಿರ್ಮಾಪಕಿ

ಸುದೀಪ್ ‘ಹೆಬ್ಬುಲಿ’ ನಾಯಕಿ ಅಮಲಾ ಪೌಲ್ ಈಗ ನಿರ್ಮಾಪಕಿ
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (09:29 IST)
ಬೆಂಗಳೂರು: ಸುದೀಪ್ ಜತೆಗೆ ಹೆಬ್ಬುಲಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಆಕೆ ಈಗ ಸಿನಿಮಾ ನಿರ್ಮಾಪಕಿಯಾಗುತ್ತಿದ್ದಾರೆ.


ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿ ಎನಿಸಿಕೊಂಡಿರುವ ಅಮಲಾ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಿರ್ಮಾಣದ ಸಾಹಸಕ್ಕೆ ಇಳಿದಿದ್ದಾರೆ. ತಮ್ಮ ಮ್ಯಾನೇಜರ್ ಜತೆಗೆ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರುವ ಅಮಲಾ ಹೊಸ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದಾರೆ.

ಮಲಯಾಳಂ ಭಾಷೆಯಲ್ಲಿ ‘ಕದವೀರ್’ ಎನ್ನುವ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಅಮಲಾ. ಇದರ ಜತೆಗೆ ಮಲಯಾಳಂ, ತಮಿಳು,  ಹಿಂದಿ ಭಾಷೆಗಳ ಸಿನಿಮಾದಲ್ಲೂ ಪಾತ್ರ ಮಾಡುತ್ತಿದ್ದಾರೆ. ಅಂತೂ ಅಮಲಾ ಈಗ ಫುಲ್ ಬ್ಯುಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಚಿರು ಸರ್ಜಾಗಾಗಿ ಹಾಡಿದ ಮೇಘನಾ ರಾಜ್