ಬೆಂಗಳೂರು: ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದು ಮಗಳಿಗೆ ಇನ್ನೂ ನಾಮಕರಣ ಮಾಡಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ಕುತೂಹಲ ತಡೆಯಲಾಗುತ್ತಿಲ್ಲ.
ಎಲ್ಲೇ ಹೋದರೂ ಅಭಿಮಾನಿಗಳು ಮಗಳಿಗೆ ಏನು ಹೆಸರಿಡ್ತೀರಿ ಎಂದು ಕೇಳೋದೇ ಆಗಿದೆ. ಅದರ ಜತೆಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಮಗಳಿಗೆ ‘ಯಶಿಕಾ’ ಎಂದು ಹೆಸರಿಡಿ ಎಂದು ಒತ್ತಾಯವನ್ನೂ ಮಾಡುತ್ತಿದ್ದಾರೆ.
ಇದೀಗ ರಾಧಿಕಾ ತಮ್ಮ ಫೇಸ್ ಬುಕ್ ಪುಟದಲ್ಲಿ ಮಗಳ ಆಟಿಕೆ ಜತೆ ಆಡುವ ಫೋಟೋವನ್ನು ಪ್ರಕಟಿಸಿದ್ದು, ಬೋರ್ ಆದಾಗಲೆಲ್ಲಾ ಅವಳ ಆಟದ ಸಾಮಾನಿನ ಜತೆ ಆಡ್ತೀನಿ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಮತ್ತೆ ನಿಮ್ಮ ಮಗಳಿಗೆ ಏನೆಂದು ಹೆಸರಿಡುತ್ತೀರಿ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಜತೆಗೆ ಕೆಲವರು ಅಷ್ಟು ಮುದ್ದು ಮಗಳಿರುವಾಗ ನಿಮಗೆ ಬೋರ್ ಆಗುವುದಾದರೂ ಹೇಗೆ ಎಂದಿದ್ದಾರೆ. ಜತೆಗೆ ಅವಳ ಆಟದ ಸಾಮಾನು ಮಾತ್ರವಲ್ಲ, ಮಗಳ ಫೋಟೋ ಹಾಕಿ ಎಂದೂ ಒತ್ತಾಯಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ