ಶೃತಿ ಬೆಳ್ಳಕ್ಕಿಗೆ ಸಿಕ್ತು ಜಾಮೀನು

ಶುಕ್ರವಾರ, 26 ಏಪ್ರಿಲ್ 2019 (15:03 IST)
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶೃತಿ ಬೆಳ್ಳಕ್ಕಿಗೆ ಜಾಮೀನು ಮಂಜೂರು ಆಗಿದೆ.

ಜಾಮೀನು ಅರ್ಜಿ ವಿಚಾರಣೆ ನಡೆಸಿದ ಧಾರವಾಡದ ಪ್ರಥಮ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ ಅವರು, ಶೃತಿ ಬೆಳ್ಳಕ್ಕಿ ಅವರಿಗೆ  ಜಾಮೀನು  ಮಂಜೂರು ಮಾಡಿದರು.

ಹಿರಿಯ ವಕೀಲರಾದ ಆರ್. ಯು. ಬೆಳ್ಳಕ್ಕಿ ಅವರು ಶೃತಿ ಪರ ಸುದೀರ್ಘವಾದ ಮಂಡಿಸಿದರು. ಆಕೆಯೂ ಕಾನೂನು ವಿದ್ಯಾರ್ಥಿಯಾಗಿದ್ದು, ಅವಳು ಯಾವುದೇ ದುರುದ್ದೇಶದಿಂದ ಆ ಮಾತುಗಳನ್ನು ಹೇಳಿಲ್ಲ.

ಅಲ್ಲದೆ, ಅವಳು ಮಾಡಿರುವ ಆರೋಪಗಳು ಯಾವುದೇ ಗಂಭೀರವಾದ ಆರೋಪಗಳು ಅಲ್ಲ. ತನ್ನ ಧರ್ಮದ ರಕ್ಷಣೆಗಾಗಿ ಆಕೆ ಮಾತನಾಡಿದ್ದಾಳೆ. ಹೀಗಾಗಿ ಮಾನ್ಯ ನ್ಯಾಯಾಲಯವು ಆಕೆಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.
ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಾಧೀಶರು  ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.

ಬಳಿಕ ಶೃತಿ ಬೆಳ್ಳಕ್ಕಿಯವರನ್ನು  ಧಾರವಾಡ ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದಿಂದ ಬಿಡುಗಡೆಗೊಳಿಸಲಾಯಿತು. 
ಶೃತಿ ಜೈಲಿನಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕ ಅಮೃತ ದೇಸಾಯಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸ್ವಾಗತಿಸಿ, ಸಿಹಿ ತಿನ್ನಿಸಿ ಬರ ಮಾಡಿಕೊಂಡರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪುಲ್ವಾಮಾ ದಾಳಿ: ಕುಮಾರಸ್ವಾಮಿ ವಿರುದ್ಧ ಕೇಸ್ ಹಾಕಿದ ಬಿಜೆಪಿ