ಸುಳ್ವಾಡಿ ದೇವಾಲಯ ವಿಷ ದುರಂತ ಪ್ರಕರಣ: 1 ನೇ ಆರೋಪಿ ಪರ ಜಾಮೀನಿಗೆ ಅರ್ಜಿ

ಬುಧವಾರ, 23 ಜನವರಿ 2019 (18:22 IST)
ಸುಳ್ವಾಡಿ ಮಾರಮ್ಮ ದೇವಾಲಯದ ವಿಷಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲನೇ ಆರೋಪಿ ಪರ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದೆ.

ಇಮ್ಮಡಿ ಮಹದೇವಸ್ವಾಮಿ ಪರ ವಕಾಲತ್ತು ವಹಿಸಲು ಮತ್ತು ಜಾಮೀನಿಗಾಗಿ ಇಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಚಾಮರಾಜನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ವಿರಾಜಪೇಟೆ ಮೂಲದ ವಕೀಲ ಅಪ್ಪಣ್ಣ.ಕೆ.ಜಿ.,  ವಕೀಲ ಸುದೇಶ್. ಹೆಚ್.ಯೂ, ವಕೀಲ ಲೋಹಿತ್ ಎ.ಎಂ ವಕಾಲತ್ತಿಗೆ ಅರ್ಜಿ ಹಾಕಿದ್ದಾರೆ.
ಆರೋಪಿ ನಂ. 1 ಇಮ್ಮಡಿ ಮಹದೇವಸ್ವಾಮಿ ಪರವಾಗಿ ಮಾತ್ರ ಅರ್ಜಿ ಸಲ್ಲಿಕೆಯಾಗಿದೆ.  

ಇದೇ ತಿಂಗಳ 29 ನೇ ತಾರೀಖಿನಂದು  ಪ್ರಕರಣದ ವಿಚಾರಣೆ ನ್ಯಾಯಾಲದಲ್ಲಿ ನಡೆಯಲಿದೆ. ಚಾಮರಾಜನಗರದ ಜಿಲ್ಲಾ ವಕೀಲರ ಸಂಘದ ಮನವಿಯನ್ನೂ ತಿರಸ್ಕರಿಸಿ ನ್ಯಾಯಾಲಯಕ್ಕೆ ವಕೀಲರು ಅರ್ಜಿ ಸಲ್ಲಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ದೋಣಿ ದುರಂತ ಪ್ರಕರಣ: 2 ಶವಗಳಿಗೆ ಮುಂದುವರಿದ ಹುಡುಕಾಟ