Publish Date: Tue, 22 Jan 2019 (09:06 IST)
Updated Date: Tue, 22 Jan 2019 (09:07 IST)
ಮುಂಬೈ: ಇನ್ನೇನು ಐಪಿಎಲ್ ಕ್ರಿಕೆಟಗೂ ಕೆಲವೇ ದಿನಗಳು ಬಾಕಿಯಿವೆ. ಆದರೆ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ನಿಷೇದಕ್ಕೊಳಗಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಐಪಿಎಲ್ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ.
ಬಿಸಿಸಿಐ ಆದಷ್ಟು ಬೇಗ ವಿಚಾರಣೆ ಮುಗಿಸಿ ಕ್ರಿಕೆಟಿಗರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳದಿದ್ದರೆ, ಈ ಇಬ್ಬರ ಐಪಿಎಲ್ ಭವಿಷ್ಯವೂ ಮಂಕಾಗಲಿದೆ. ಹೀಗಾಗಿ ಹಾರ್ದಿಕ್ ಪ್ರತಿನಿಧಿಸುವ ಮುಂಬೈ ಇಂಡಿಯನ್ಸ್ ತಂಡ ಬೇಗನೇ ವಿಚಾರಣೆ ಪೂರ್ಣಗೊಳಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹಾಕಿತ್ತು ಎಂಬ ವರದಿ ಬಂದಿತ್ತು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ತಾನು ಬಿಸಿಸಿಐ ಮೇಲೆ ಯಾವುದೇ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಮೂಗು ತೂರಿಸುವುದಿಲ್ಲ ಎಂದು ಅದು ಸ್ಪಷ್ಟವಾಗಿ ಹೇಳಿದೆ. ಆದರೆ ಬಿಸಿಸಿಐ ನಿಧಾನಗತಿಯಲ್ಲಿ ತನಿಖೆ ನಡೆಸಿದರೆ ಈ ಕ್ರಿಕೆಟಿಗರ ಐಪಿಎಲ್ ಮತ್ತು ವಿಶ್ವಕಪ್ ಭವಿಷ್ಯದ ಮೇಲೆ ಪರಿಣಾಮ ಬೀರುವುದು ಖಂಡಿತಾ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ