Publish Date: Sat, 19 Jan 2019 (10:47 IST)
Updated Date: Sat, 19 Jan 2019 (10:49 IST)
ಮುಂಬೈ: ಖಾಸಗಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ತಪ್ಪಿಗೆ ನಿಷೇಧಕ್ಕೊಳಗಾಗಿರುವ ಹಾರ್ದಿಕ್ ಪಾಂಡ್ಯ ಬಗ್ಗೆ ಅವರ ಮಾಜಿ ಪ್ರೇಯಸಿ ಎಲ್ಲಿ ಅವ್ರಾಮ್ ಪ್ರತಿಕ್ರಿಯಿಸಿದ್ದಾರೆ.
ಹಾರ್ದಿಕ್ ನ ಈ ಮುಖ ನಾನು ನೋಡಿಯೇ ಇರಲಿಲ್ಲ. ನನಗೆ ಗೊತ್ತಿರುವ ಹಾರ್ದಿಕ್ ಇವರಾಗಿರಲಿಲ್ಲ ಎಂದು ಎಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಡೀ ಪ್ರಕರಣ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ.
‘ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಗುವುದು ಬಹಳ ಅಪರೂಪ. ಅದರಲ್ಲೂ ಒಬ್ಬ ಕ್ರಿಕೆಟಿಗನಾಗಿ ಅವರನ್ನು ಹಲವು ಯುವಕರು ಹಿಂಬಾಲಿಸುತ್ತಾರೆ. ಹಾಗಿರುವಾಗ ಉಡಾಫೆಯಿಂದ ಸಾರ್ವಜನಿಕವಾಗಿ ಇಂತಹ ಮಾತನಾಡುವುದು ತಪ್ಪು’ ಎಂದು ಎಲ್ಲಿ ಹೇಳಿಕೊಂಡಿದ್ದಾರೆ.
ಇನ್ನೊಬ್ಬ ನಟಿ ಸ್ವರ ಭಾಸ್ಕರ್ ಕೂಡಾ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಅವರು ಹಾರ್ದಿಕ್ ಪರವಾಗಿ ಮಾತನಾಡಿದ್ದಾರೆ. ನಾನೂ ಮಹಿಳಾವಾದಿಯೇ. ಆದರೆ ಇಂತಹ ಕಾಮೆಂಟ್ ಗಳೇ ಅಪರಾಧ ಎಂದರೆ ನಂಬಲಾಗುತ್ತಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ