Publish Date: Wed, 16 Jan 2019 (09:26 IST)
Updated Date: Wed, 16 Jan 2019 (09:27 IST)
ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದರೆಂದು ಟೀಂ ಇಂಡಿಯಾದಿಂದ ನಿಷೇಧಕ್ಕೊಳಗಾಗಿರುವ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪರವಾಗಿ ವೇಗಿ ಶ್ರೀಶಾಂತ್ ಮಾತನಾಡಿದ್ದಾರೆ.
ಈ ಇಬ್ಬರು ಕ್ರಿಕೆಟಿಗರು ಮಾಡಿದ್ದು ತಪ್ಪೇ. ಆದರೆ ಇವರಿಗಿಂತಲೂ ದೊಡ್ಡ ತಪ್ಪು ಮಾಡಿದವರು ಹಾಗೆಯೇ ಇದ್ದಾರೆ. ಹಾಗಿರುವಾಗ ಇವರಿಗೆ ಇಷ್ಟು ದೊಡ್ಡ ಶಿಕ್ಷೆ ಬೇಕಿರಲಿಲ್ಲ ಎಂದು ಶ್ರೀಶಾಂತ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಗೆ ಕೆಲವೇ ದಿನಗಳು ಬಾಕಿಯಿವೆ. ರಾಹುಲ್ ಮತ್ತು ಪಾಂಡ್ಯ ಟೀಂ ಇಂಡಿಯಾದ ವಿಶ್ವಕಪ್ ಭಾಗವಾಗಬೇಕಿತ್ತು. ಈ ಸಂದರ್ಭದಲ್ಲಿ ಇಬ್ಬರಿಗೂ ನಿಷೇಧ ವಿಧಿಸಿದ್ದು ಸರಿಯಲ್ಲ ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ