Publish Date: Sun, 13 Jan 2019 (09:00 IST)
Updated Date: Sun, 13 Jan 2019 (09:03 IST)
ಮುಂಬೈ: ಖಾಸಗಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ತಂಡದಿಂದ ಅಮಾನತಿನ ಶಿಕ್ಷೆಗೊಳಗಾಗಿರುವ ಟೀಂ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಇದೀಗ ಆಸೀಸ್ ಸರಣಿ ನಡುವೆ ತವರಿಗೆ ಮರಳಿದ್ದಾರೆ.
ಸಸ್ಪೆಂಡ್ ಆದ ಆಟಗಾರರು ಇದೀಗ ಸರಣಿಯ ಅರ್ಧದಲ್ಲೇ ತವರಿಗೆ ಮರಳಿ ಹೊಸ ಕುಖ್ಯಾತಿಗೆ ಒಳಗಾಗಿದ್ದಾರೆ. ಭಾರತೀಯ ಕ್ರಿಕೆಟ್ ನ 82 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇದುವರೆಗೆ ಯಾರೂ ಈ ರೀತಿ ಅಶಿಸ್ತಿನ ಕಾರಣಕ್ಕೆ ಕ್ರಿಕೆಟ್ ಸರಣಿಯ ಅರ್ಧದಲ್ಲಿ ತವರಿಗೆ ವಾಪಸಾಗಿರಲಿಲ್ಲ. ಆದರೆ ಪಾಂಡ್ಯ-ರಾಹುಲ್ ಈ ಕುಖ್ಯಾತಿ ತಂದುಕೊಂಡಿದ್ದಾರೆ.
ಒಟ್ಟಾರೆ ಇದುವರೆಗೆ ಭಾರತೀಯ ಕ್ರಿಕೆಟ್ ನಲ್ಲಿ ಅಶಿಸ್ತಿನ ಕಾರಣಕ್ಕೆ ಆಟಗಾರರು ಸಸ್ಪೆಂಡ್ ಆಗುತ್ತಿರುವುದು ಈ ಪ್ರಕರಣವೂ ಸೇರಿ ಎರಡನೇ ಬಾರಿ ಅಷ್ಟೇ. ಇದಕ್ಕೂ ಮೊದಲು 1936 ರಲ್ಲಿ ಲಾಲಾ ಅಮರನಾಥ್ ಬಂಡಾಯವೆದ್ದು ಅಶಿಸ್ತು ತೋರಿದ್ದಕ್ಕೆ ದೇಶೀಯ ಪಂದ್ಯವೊಂದರಿಂದ ಅಮಾನತುಗೊಂಡಿದ್ದರು. ಅದು ಬಿಟ್ಟರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ