ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಗೆಲ್ಲಲು 289 ರನ್ ಗಳ ಗುರಿ ನೀಡಿದೆ.
									
										
								
																	
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಆರಂಭದಲ್ಲಿ ನಿಧಾನಗತಿಯ ರನ್ ಗಳಿಸಿತ್ತು. ವಿಕೆಟ್ ಗಳು ಅಷ್ಟಾಗಿ ಉರುಳದೇ ಇದ್ದರೂ ಮಧ್ಯಮ ಓವರ್ ಗಳಲ್ಲಿ ಭಾರತೀಯ ಸ್ಪಿನ್ನರ್ ಗಳು ರನ್ ಕೊಡದೇ ಬಿಗುವಿನ ದಾಳಿ ನಡೆಸಿದ್ದರು. ಪರಿಣಾಮ 40 ಓವರ್ ಆಗುವಾಗ ಆಸೀಸ್ 200 ರನ್ ಗಡಿ ದಾಟಿತ್ತಷ್ಟೇ.
									
			
			 
 			
 
 			
					
			        							
								
																	ಆದರೆ ಅಂತಿಮ ಹಂತದಲ್ಲಿ ಮತ್ತೆ ವೇಗಿಗಳು ದಾಳಿಗಿಳಿದಾಗ ಚಿತ್ರಣ ಬದಲಾಯಿತು. ಸೆಟ್ ಆಗಿದ್ದ ಬ್ಯಾಟ್ಸ್ ಮನ್ ಮಾರ್ಕಸ್ ಸ್ಟಾಯಿನಿಸ್ (47) ವೇಗಿಗಳನ್ನು ಮನಬಂದಂತೆ ಚಚ್ಚಿದರು. ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಸಾಕಷ್ಟು ರನ್ ಹರಿದುಬಂತು. ಇದರಿಂದಾಗಿ ಅಂತಿಮ  ಓವರ್ ನಲ್ಲಿ ಆಸೀಸ್ 88 ರನ್ ಗಳಿಸಿತು. ಪರಿಣಾಮ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾ 288 ರನ್ ಗಳಿಸಿತು.
									
										
								
																	ಭಾರತದ ಪರ ಭುವನೇಶ್ವರ್ ಕುಮಾರ್ 2 ಕಿತ್ತು ಏಕದಿನ ಪಂದ್ಯದಲ್ಲಿ 100 ವಿಕೆಟ್ ಕಬಳಿಸಿದ ದಾಖಲೆಯನ್ನೂ ಮಾಡಿದರು. ಉಳಿದಂತೆ ಕುಲದೀಪ್ ಯಾದವ್ ಗ 2 ಮತ್ತು ರವೀಂದ್ರ ಜಡೇಜಾಗೆ 1 ವಿಕೆಟ್ ಸಿಕ್ಕಿತು.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ