ನಿವೃತ್ತಿ ನಂತರದ ಜೀವನದಲ್ಲಿ ಏನು ಮಾಡ್ತೀರಿ ಎಂದಿದ್ದಕ್ಕೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?

ಶನಿವಾರ, 12 ಜನವರಿ 2019 (09:27 IST)
ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಮೇಲೆ ಸಾಮಾನ್ಯವಾಗಿ ಕ್ರಿಕೆಟಿಗರು ಟಿ20 ಪಂದ್ಯಗಳಲ್ಲಿ, ಕ್ಲಬ್ ಟೂರ್ನಿಗಳಲ್ಲಿ ಆಡುತ್ತಿರುತ್ತಾರೆ.  ಆದರೆ ನಿವೃತ್ತಿ ನಂತರ ವಿರಾಟ್ ಕೊಹ್ಲಿ ಏನು ಮಾಡುತ್ತಾರೆ ಗೊತ್ತಾ?


ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ ಪ್ರಶ್ನೆ ಎದುರಾಯಿತು. ನಿವೃತ್ತಿ ನಂತರ ನೀವು ಆಸ್ಟ್ರೇಲಿಯನ್ ಬಿಗ್ ಬಾಶ್ ನಂತಹ ಕ್ರಿಕೆಟ್ ಟೂರ್ನಿಗಳಲ್ಲಿ ಆಡುತ್ತೀರಾ ಎಂದು ಅವರಿಗೆ ಪ್ರಶ್ನೆ ಕೇಳಿದಾಗ ಖಂಡಿತಾ ಇಲ್ಲ. ನಿವೃತ್ತಿ ಘೋಷಿಸಿದ ಮೇಲೆ ಮತ್ತೆಂದಿಗೂ ನಾನು ಬ್ಯಾಟ್ ಎತ್ತಿಕೊಳ್ಳಲ್ಲ ಎಂದಿದ್ದಾರೆ.

‘ನನಗೆ ಕ್ರಿಕೆಟ್ ಆಡಿದ್ದು ಸಾಕು ಎನಿಸಿದ್ದಕ್ಕೇ ನಾನು ನಿವೃತ್ತಿ ಹೇಳುತ್ತೇನೆ. ಹಾಗಿರುವಾಗ ಮತ್ತೆ ಮೈದಾನಕ್ಕಿಳಿಯುವುದು, ಬ್ಯಾಟಿಂಗ್ ಮಾಡುವ ಬಗ್ಗೆಯೆಲ್ಲಾ ಯೋಚನೆ ಮಾಡಲಾರೆ. ನಿವೃತ್ತಿ ನಂತರ ಕ್ರಿಕೆಟ್ ಕಡೆಗೆ ತಿರುಗಿಯೂ ನೋಡಲ್ಲ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಾರ್ದಿಕ್ ಪಾಂಡ್ಯ ಕಾಮೆಂಟ್ ಮಾಡಿದ್ದು ಸರಿಯಲ್ಲ: ಕಾಫಿ ವಿತ್ ಶೋ ವಿವಾದದ ಬಗ್ಗೆ ಕೊಹ್ಲಿ ಮಾತು