Select Your Language

Notifications

webdunia
webdunia
webdunia
Sunday, 13 April 2025
webdunia

ಸಸ್ಪೆಂಡ್ ಆದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಬದಲಿಗೆ ಟೀಂ ಇಂಡಿಯಾಗೆ ಹೊಸಬರ ಆಯ್ಕೆ

ಕೆಎಲ್ ರಾಹುಲ್
ಸಿಡ್ನಿ , ಭಾನುವಾರ, 13 ಜನವರಿ 2019 (09:28 IST)
ಸಿಡ್ನಿ: ಮಹಿಳೆಯರ  ಬಗ್ಗೆ ಖಾಸಗಿ ವಾಹಿನಿ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿ ಟೀಂ ಇಂಡಿಯಾದಿಂದ ಸಸ್ಪೆಂಡ್ ಆದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಬದಲಿ ಆಟಗಾರರನ್ನು ಘೋಷಿಸಲಾಗಿದೆ.


ರಾಹುಲ್ ಮತ್ತು ಪಾಂಡ್ಯ ತವರಿಗೆ ಮರಳಲಿದ್ದು, ಬಿಸಿಸಿಐ ತನಿಖಾ ಸಮಿತಿಯ ವಿಚಾರಣೆ ಎದುರಿಸಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಉಳಿದ ಪಂದ್ಯಗಳಿಗೆ ಭಾರತ ತಂಡಕ್ಕೆ ಶಬ್ನಮ್ ಗಿಲ್ ಮತ್ತು ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ.

ಆದರೆ ಈ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ. ಈ ನಡುವೆ ಅಮಾನತುಗೊಂಡಿರುವ ಕ್ರಿಕೆಟಿಗರ ವಿಚಾರಣೆಯನ್ನು ತ್ವರಿತವಾಗಿ ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ವೇಳೆಗೆ ಈ ಆಟಗಾರರು ತಂಡಕ್ಕೆ ವಾಪಸಾದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋತ ಪಂದ್ಯದಲ್ಲೂ ಧೋನಿ, ರೋಹಿತ್ ಶರ್ಮಾ ದಾಖಲೆ