ಇದೇನು ಈ ಥರಾ ಬೌಲಿಂಗ್ ಮಾಡ್ತಾರಾ? ಅಂಬುಟಿ ರಾಯುಡು ಬೌಲಿಂಗ್ ನೋಡಿ ಕೊಹ್ಲಿಗೇ ಮಂಡೆಬಿಸಿ ಶುರುವಾಯ್ತು!

ಭಾನುವಾರ, 13 ಜನವರಿ 2019 (09:06 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಅರೆಕಾಲಿಕ ಬೌಲರ್ ಆಗಿ ಬೌಲಿಂಗ್ ಮಾಡಿದ ಅಂಬಟಿ ರಾಯುಡು ಬೌಲಿಂಗ್ ಆಕ್ಷನ್ ನೋಡಿ ವೀಕ್ಷಕರು ಅವಕ್ಕಾಗಿದ್ದಾರೆ.


ಮೊಹಮ್ಮದ್ ಶಮಿ ಯಾವುದೋ ಕಾರಣಕ್ಕೆ ಪೆವಿಲಿಯನ್ ಗೆ ಮರಳಿದಾಗ ಕೊಹ್ಲಿ 22 ನೇ ಓವರ್ ನಲ್ಲಿ ಅಂಬಟಿ ರಾಯುಡುಗೆ ಬೌಲ್ ನೀಡಿದರು. ಆದರೆ ರಾಯುಡು ಬೌಲಿಂಗ್ ಮಾಡುವ ಶೈಲಿ ನೋಡಿ ಹಲವರು ನಕ್ಕರೆ ಇನ್ನು ಕೆಲವರು ಇದು ಲೀಗಲ್ ಬೌಲ್ ಹೌದೋ ಅಲ್ವೋ ಎಂದು ಅನುಮಾನ ವ್ಯಕ್ತಪಡಿಸಿದರು.

ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಏನೋ ರಾಯುಡು ಬೌಲಿಂಗ್ ಶೈಲಿ ವಿಶ್ವ ವಿಖ್ಯಾತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ನಂತಿದೆ ಎಂದು ಹೊಗಳಿದರು. ಆದರೆ ರಾಯುಡು ಶೈಲಿ ಮಾತ್ರ ಪ್ರೇಕ್ಷಕರಿಗೆ ಫನ್ನಿ ಎನಿಸಿತು. ಮತ್ತೆ ಶಮಿ ಮೈದಾನಕ್ಕೆ ಬಂದಾಗ ನಿಟ್ಟುಸಿರು ಬಿಟ್ಟ ನಾಯಕ ಕೊಹ್ಲಿ ತಡಮಾಡದೇ ಶಮಿಗೆ ಬಾಲ್ ಹಸ್ತಾಂತರಿಸಿದರು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕೆಂದು ದ್ರಾವಿಡ್ ನೋಡಿ ಕಲಿಯಿರಿ! ವಿಡಿಯೋ ಮೂಲಕ ಹಾರ್ದಿಕ್ ಗೆ ಪಾಠ