ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕೆಂದು ದ್ರಾವಿಡ್ ನೋಡಿ ಕಲಿಯಿರಿ! ವಿಡಿಯೋ ಮೂಲಕ ಹಾರ್ದಿಕ್ ಗೆ ಪಾಠ

ಭಾನುವಾರ, 13 ಜನವರಿ 2019 (09:04 IST)
ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಟೀಂ ಇಂಡಿಯಾದಿಂದ ಅಮಾನತಿಗೊಳಗಾಗಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಗೆ ಟ್ವಿಟರಿಗರೊಬ್ಬರು ರಾಹುಲ್ ದ್ರಾವಿಡ್ ಅವರ ಹಳೆಯ ವಿಡಿಯೋ ಹಾಕಿ ಪಾಠ  ಹೇಳಿದ್ದಾರೆ.


ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ದ್ರಾವಿಡ್ ನೋಡಿ ಕಲಿಯಿರಿ ಎಂದು ಅಮಾನತಿಗೊಳಗಾದ ಕ್ರಿಕೆಟಿಗರಿಗೆ ವ್ಯಕ್ತಿಯೊಬ್ಬರು ಹಳೆಯ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ಸಲಹೆ ಮಾಡಿದ್ದಾರೆ.

2000 ರಲ್ಲಿ ದ್ರಾವಿಡ್ ಎಂಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರನ್ನು ಫೂಲ್ ಮಾಡಲು ಸಂದರ್ಶಕಿ ಸಂದರ್ಶನ ಮುಗಿದ ಮೇಲೆ ಪಕ್ಕದಲ್ಲಿ ಬಂದು ಕುಳಿತು ಮದುವೆಯಾಗುವಂತೆ ಒತ್ತಾಯಿಸುತ್ತಾಳೆ. ತಕ್ಷಣ ಸೀಟಿನಿಂದ ಏಳುವ ದ್ರಾವಿಡ್ ಹೊರಗೆ ಹೋಗಲು ಯತ್ನಿಸಿದಾಗ ಸಂದರ್ಶಕಿಯ ಅಪ್ಪ ಮಧ್ಯಪ್ರವೇಶಿಸುತ್ತಾರೆ. ಈ ವೇಳೆ ದ್ರಾವಿಡ್ ಅಪ್ಪ ಮತ್ತು ಮಗಳಿಗೆ ಮೊದಲು ಓದಿನ ಬಗ್ಗೆ ಗಮನ ಕೊಡು. ಮದುವೆ ಬಗ್ಗೆ ಆಮೇಲೆ ಯೋಚಿಸು ಎಂದೆಲ್ಲಾ ಬುದ್ಧಿ ಹೇಳುತ್ತಾರೆ.

ಒಬ್ಬ ಯುವತಿ ಸಂದರ್ಶನ ಕೊಠಡಿಯಲ್ಲಿ ಎಲ್ಲರೂ ಹೊರ ಕಳುಹಿಸಿ ಈ ರೀತಿ ಹೇಳಿದಾಗ ಅದರ ದುರ್ಬಳಕೆ ಮಾಡದ ದ್ರಾವಿಡ್ ಆ ಮಹಿಳೆಯೊಂದಿಗೆ ವರ್ತಿಸಿದ ರೀತಿ ತೋರಿಸಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ಈ ರೀತಿ ನಡೆದುಕೊಳ್ಳುವುದನ್ನು ಕಲಿಯಿರಿ ಎಂದು ಟ್ವಿಟರಿಗರು ಸಲಹೆ ನೀಡಿದ್ದಾರೆ. ಈ ವಿಡಿಯೋ ಈಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಮಾಡಿದ್ದನ್ನು 82 ವರ್ಷಗಳಲ್ಲಿ ಯಾರೂ ಮಾಡಿಲ್ಲ!