ಸೋತ ಪಂದ್ಯದಲ್ಲೂ ಧೋನಿ, ರೋಹಿತ್ ಶರ್ಮಾ ದಾಖಲೆ

ಭಾನುವಾರ, 13 ಜನವರಿ 2019 (09:11 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಸೋತರೂ ಟೀಂ ಇಂಡಿಯಾ ಕ್ರಿಕೆಟಿಗರಾದ ಧೋನಿ ಮತ್ತು ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.


ಈ ಪಂದ್ಯದಲ್ಲಿ ಇಬ್ಬರೂ ಆಟಗಾರರೂ 137 ರನ್ ಗಳ ಜತೆಯಾಟವಾಡಿ ಭಾರತದ ಹೀನಾಯ ಸ್ಥಿತಿಯನ್ನು ತಪ್ಪಿಸಿದ್ದರು. ಜತೆಗೆ ವೈಯಕ್ತಿಕವಾಗಿಯೂ ಇಬ್ಬರೂ ಹೊಸ ದಾಖಲೆ ಮಾಡಿದ್ದಾರೆ.

22 ನೇ ಏಕದಿನ ಶತಕ ಸಿಡಿಸಿದ ರೋಹಿತ್ ಶರ್ಮಾ ಆ ಮೂಲಕ ಏಕದಿನ ಶತಕಗಳ ಪಟ್ಟಿಯಲ್ಲಿ ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದರು. ಇನ್ನು, ಆಸ್ಟ್ರೇಲಿಯಾದಲ್ಲಿ ಐದು ಶತಕ ಹೊಡೆದು ಕುಮಾರ ಸಂಗಕ್ಕಾರ ಜತೆಗೆ ಆಸೀಸ್ ನಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದ ಸಾಧನೆ ಮಾಡಿದರು. ಅಷ್ಟೇ ಅಲ್ಲ, ಉಭಯ ದೇಶಗಳ ನಡುವಿನ ಕ್ರಿಕೆಟಿಗರ ಪೈಕಿ ಅತೀ ಹೆಚ್ಚು ಏಕದಿನ ರನ್ ಗಳಿಸಿದವರ ಪಟ್ಟಿಯಲ್ಲಿ ಆಡಂ ಗಿಲ್ ಕ್ರಿಸ್ಟ್ ದಾಖಲೆ ಹಿಂದಿಕ್ಕಿದರು.

ಇನ್ನು, ಮಾಜಿ ನಾಯಕ ಧೋನಿ ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಪೂರೈಸಿದರು. ಈ ಮೂಲಕ ಹತ್ತು ಸಾವಿರ ರನ್ ಗಳಿಸಿದ 10 ಸಾವಿರ ರನ್ ಗಳಿಸಿದ ಭಾರತೀಯ ಆಟಗಾರರೆನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇದೇನು ಈ ಥರಾ ಬೌಲಿಂಗ್ ಮಾಡ್ತಾರಾ? ಅಂಬುಟಿ ರಾಯುಡು ಬೌಲಿಂಗ್ ನೋಡಿ ಕೊಹ್ಲಿಗೇ ಮಂಡೆಬಿಸಿ ಶುರುವಾಯ್ತು!