Publish Date: Mon, 21 Jan 2019 (10:59 IST)
Updated Date: Mon, 21 Jan 2019 (11:01 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಾ ಆಧುನಿಕ ದಿಗ್ಗಜರ ಸಾಲಿಗೆ ಸೇರ್ಪಡೆಯಾಗಿದ್ದೇನೋ ನಿಜ. ಆದರೆ ಕೊಹ್ಲಿಗೆ ಕ್ರಿಕೆಟ್ ಪ್ರಥಮ ಆದ್ಯತೆ ಅಲ್ಲವಂತೆ!
ಹೀಗಂತ ತಮ್ಮ ಅಧಿಕೃತ ಆಪ್ ನಲ್ಲಿ ನೀಡಿರುವ ಸಂದರ್ಶನದಲ್ಲಿ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ನನ್ನ ಜೀವನದ ಒಂದು ಭಾಗ. ಆದರೆ ಅದುವೇ ಆದ್ಯತೆಯಲ್ಲ ಎಂದಿದ್ದಾರೆ.
‘ನನ್ನ ಜೀವನದಲ್ಲಿ ಮೊದಲ ಆದ್ಯತೆ ನನ್ನ ಕುಟುಂಬಕ್ಕೆ. ಮೊದಲ ಆದ್ಯತೆ ನನಗೆ, ಅನುಷ್ಕಾಗೆ ಮತ್ತು ನನ್ನ ಕುಟುಂಬಕ್ಕೆ. ಕ್ರಿಕೆಟ್ ಖಂಡಿತವಾಗಿಯೂ ನನ್ನ ಜೀವನದ ಒಂದು ಭಾಗವೇ. ಆದರೆ ನನ್ನ ಕುಟುಂಬಕ್ಕಿಂತ ದೊಡ್ಡದು ಯಾವುದೂ ಇಲ್ಲ. ಕ್ರಿಕೆಟ್ ಇಲ್ಲದೇ ಇದ್ದರೆ ನಿಮ್ಮ ಜೀವನ ಏನಾಗಬಹುದು ಎಂದು ನನಗೆ ಕೆಲವರು ಪ್ರಶ್ನಿಸುತ್ತಾರೆ. ನನ್ನ ಪ್ರಕಾರ ಅಂತಹ ಪ್ರಶ್ನೆಗಳಿಗೆಲ್ಲಾ ಅರ್ಥವಿಲ್ಲ’ ಎಂದು ಕೊಹ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ