Select Your Language

Notifications

webdunia
webdunia
webdunia
webdunia

ನ್ಯೂಜಿಲೆಂಡ್ ಗೆ ಬಂದಿಳಿದ ಟೀಂ ಇಂಡಿಯಾಗೆ ಮುಗಿಬಿದ್ದ ಅಭಿಮಾನಿಗಳು

ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಸರಣಿ
ಆಕ್ಲೆಂಡ್: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್, ಏಕದಿನ ದಿಗ್ವಿಜಯ ಸಾಧಿಸಿ ಇದೀಗ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರ್‍ ಗಳ ಸರಣಿ ಆಡಲು ಆಕ್ಲೆಂಡ್ ಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ.


ಇದುವರೆಗೆ ಆಸ್ಟ್ರೇಲಿಯಾದಂತೆ ನ್ಯೂಜಿಲೆಂಡ್ ನಲ್ಲೂ ಟೀಂ ಇಂಡಿಯಾ ಜಯ ಗಳಿಸಲು ಹೆಣಗಾಡಿತ್ತು. ಅಲ್ಲಿನ ಟೀಂ ಇಂಡಿಯಾ ದಾಖಲೆ ಅಷ್ಟೇನೂ ಉತ್ತಮವಾಗಿಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೊಸ ದಾಖಲೆ ಬರೆಯಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ.

ಹೀಗಾಗಿ ಭಾರೀ ನಿರೀಕ್ಷೆಯೊಂದಿಗೆ ಆಕ್ಲೆಂಡ್ ಗೆ ಬಂದಿಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಇಡೀ ತಂಡಕ್ಕೆ ವಿಮಾನ ನಿಲ್ದಾಣದಲ್ಲಿಯೇ ಅಭಿಮಾನಿಗಳು ಹರ್ಷೋದ್ಘಾರದ ಮೂಲಕ  ಬರಮಾಡಿಕೊಂಡಿದ್ದಾರೆ. ಅದರಲ್ಲೂ ಟೀಂ ಇಂಡಿಯಾದ ಸ್ಟಾರ್ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಿಕ್ಕಿರಿದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಸೆಮಿಫೈನಲ್ ನಲ್ಲಿ ಕರ್ನಾಟಕಕ್ಕೆ ಚೇತೇಶ್ವರ ಪೂಜಾರರಿಂದ ಗಂಡಾಂತರ