Select Your Language

Notifications

webdunia
webdunia
webdunia
webdunia

ಗೆಲುವಿನ ಬಳಿಕ ಬಾಲ್ ತಗೊಳ್ಳಪ್ಪ ಎಂದು ಧೋನಿ ಕೋಚ್ ಸಂಜಯ್ ಬಂಗಾರ್ ಗೆ ಜೋಕ್ ಮಾಡಿದ್ದೇಕೆ ಗೊತ್ತಾ?!

ಧೋನಿ
ಮೆಲ್ಬೋರ್ನ್: ಹಿಂದೊಮ್ಮೆ ಧೋನಿ ಪಂದ್ಯ ಮುಗಿದ ಬಳಿಕ ಅಂಪಾಯರ್ ಬಳಿಯಿಂದ ಬಾಲ್ ಪಡೆದುಕೊಂಡಿದ್ದಕ್ಕೆ ಅವರು ನಿವೃತ್ತಿಯಾಗುತ್ತಾರೆಂದು ಸುದ್ದಿಯಾಗಿದ್ದು ಎಲ್ಲರಿಗೂ ನೆನಪಿರಬಹುದು.


ಕೊನೆಗೆ ಕೋಚ್ ರವಿಶಾಸ್ತ್ರಿ ಧೋನಿ ನಿವೃತ್ತಿಯಾಗುತ್ತಿಲ್ಲ, ಬೌಲಿಂಗ್ ಕೋಚ್ ಭರತ್ ಅರುಣ್ ಗೆ ನೆರವಾಗಲು ಮ್ಯಾಚ್ ಬಾಲ್ ಪಡೆದಿದ್ದರಷ್ಟೇ ಎಂದು ಸ್ಪಷ್ಟನೆ ಕೊಡಬೇಕಾಗಿ ಬಂತು. ಇದೀಗ ಮತ್ತೆ ಆಸ್ಟ್ರೇಲಿಯಾ ವಿರುದ್ಧ ತೃತೀಯ ಪಂದ್ಯ ಮುಗಿದ ಬಳಿಕ ಧೋನಿ ಬಾಲ್ ಪಡೆದು ತಕ್ಷಣ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಗೆ ಬಾಲ್ ಒಪ್ಪಿಸಿದ್ದಾರೆ.

ಆದರೆ ಈ ಬಾರಿ ಮತ್ತೆ ಹಿಂದಿನ ತಪ್ಪು ಮರುಕಳಿಸದಂತೆ ಧೋನಿ ಸಂಜಯ್ ಬಂಗಾರ್ ಗೆ ಬಾಲ್ ಒಪ್ಪಿಸುತ್ತಾ, ‘ಬಾಲ್ ತಗೊಳ್ಳೀಪ್ಪಾ.. ಆಮೇಲೆ ನಾನು ನಿವೃತ್ತಿಯಾಗುತ್ತಿದ್ದೇನೆಂದು ಅಂದುಕೊಳ್ಳುತ್ತಾರೆ’ ಎಂದು ಜೋಕ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಓಪನ್ ಟೆನಿಸ್ ಗೆ ಬಂದ ವಿರಾಟ್ ಕೊಹ್ಲಿ, ಅನುಷ್ಕಾ