ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ಗೆದ್ದು ಬೀಗಿದೆ. ಆದರೆ ಗೆದ್ದ ತಂಡಕ್ಕೆ ಬಹುಮಾನ ಮೊತ್ತ ಕೊಡದ ಆಸೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿ ಕಾರಿದ್ದಾರೆ.
ಏಕದಿನ ಸರಣಿ ಆಯೋಜಿಸಿ ಹಲವು ಮೂಲಗಳಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸಾಕಷ್ಟು ಲಾಭ ಗಳಿಸಿರುತ್ತದೆ. ಆದರೆ ಗೆದ್ದ ತಂಡಕ್ಕೆ ಒಂದು ಟ್ರೋಫಿ ಮತ್ತು ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಯೆಂದು ಕೇವಲ 500 ಅಮೆರಿಕನ್ ಡಾಲರ್ ನೀಡಲಾಗಿದೆ.
ಸರಣಿ ಆಯೋಜಿಸಿ ಇಷ್ಟೆಲ್ಲಾ ಲಾಭ ಗಳಿಸುವುದಕ್ಕೆ ಕ್ರಿಕೆಟಿಗರು ಮುಖ್ಯ ಕಾರಣ. ಹಾಗಿರುವಾಗ ಅವರಿಗೆ ಕೇವಲ ಟ್ರೋಫಿ ಮಾತ್ರ ನೀಡಿದ್ದು ಯಾಕೆ? ನಗದು ಬಹುಮಾನವನ್ನು ಯಾಕೆ ನೀಡಿಲ್ಲ ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.
ಧೋನಿ ತಮಗೆ ಸಿಕ್ಕ ಸರಣಿ ಶ್ರೇಷ್ಠ ಪ್ರಶಸ್ತಿಯ ಹಣವನ್ನು ಚ್ಯಾರಿಟಿಯೊಂದಕ್ಕೆ ದಾನ ಮಾಡಿದ್ದರು. ಅದರ ಹೊರತಾಗಿ ತಂಡಕ್ಕೆ ಒಂದು ಟ್ರೋಫಿ ಮಾತ್ರ ನೀಡಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ