Select Your Language

Notifications

webdunia
webdunia
webdunia
webdunia

ವಿವಾದದ ಬಳಿಕ ಮತ್ತೆ ಸಾರ್ವಜನಿಕವಾಗಿ ಪ್ರತ್ಯಕ್ಷರಾದ ಹಾರ್ದಿಕ್ ಪಾಂಡ್ಯ

ವಿವಾದದ ಬಳಿಕ ಮತ್ತೆ ಸಾರ್ವಜನಿಕವಾಗಿ ಪ್ರತ್ಯಕ್ಷರಾದ ಹಾರ್ದಿಕ್ ಪಾಂಡ್ಯ
ಮುಂಬೈ , ಭಾನುವಾರ, 20 ಜನವರಿ 2019 (09:24 IST)
ಮುಂಬೈ: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಕ್ಕೆ ಟೀಂ ಇಂಡಿಯಾದಿಂದ ನಿಷೇಧಕ್ಕೊಳಗಾಗಿದ್ದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.


ಭಾರತಕ್ಕೆ ಮರಳಿದ ಬಳಿಕ ಮನೆಯಿಂದ ಹೊರಗೆ ಕಾಲಿಡದ ಹಾರ್ದಿಕ್ ಯಾರ ಫೋನ್ ಕರೆಗಳನ್ನೂ ಸ್ವೀಕರಿಸುತ್ತಿಲ್ಲ, ಬೇಸರದಲ್ಲಿದ್ದಾನೆ ಎಂದು ಹಾರ್ದಿಕ್ ತಂದೆ ಹಿಮಾಂಶು ಮೊನ್ನೆಯಷ್ಟೇ ಹೇಳಿದ್ದರು.

ಇದೀಗ ಹಾರ್ದಿಕ್ ತಮ್ಮ ಸಹೋದರ, ಕ್ರಿಕೆಟಿಗ ಕೃನಾಲ್ ಪಾಂಡ್ಯ ಜತೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾದದ ಬಳಿಕ ಇದೇ ಮೊದಲ ಬಾರಿಗೆ ಹಾರ್ದಿಕ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ವೇಳೆ ತೀರಾ ಗಂಭೀರವಾಗಿದ್ದಂತೆ ತೋರುತ್ತಿದ್ದ ಹಾರ್ದಿಕ್ ಯಾರೊಂದಿಗೂ ಮಾತನಾಡದೇ ವಿಮಾನವೇರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಗೆಲುವಿನ ಬಳಿಕ ಬಾಲ್ ತಗೊಳ್ಳಪ್ಪ ಎಂದು ಧೋನಿ ಕೋಚ್ ಸಂಜಯ್ ಬಂಗಾರ್ ಗೆ ಜೋಕ್ ಮಾಡಿದ್ದೇಕೆ ಗೊತ್ತಾ?!