Publish Date: Mon, 21 Jan 2019 (09:39 IST)
Updated Date: Mon, 21 Jan 2019 (09:40 IST)
ದುಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನವಿತ್ತ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ಐಸಿಸಿ ವಿಶೇಷ ಗೌರವ ನೀಡಿದೆ.
ತನ್ನ ಟ್ವಿಟರ್ ಪೇಜ್ ನ ಕವರ್ ಫೋಟೋವಾಗಿ ಧೋನಿ ಚಿತ್ರ ಬಳಸಿಕೊಂಡು ಗೌರವ ಸಲ್ಲಿಸಿದೆ. ಐಸಿಸಿ ನೀಡಿದ ಗೌರವ ನೋಡಿ ಅಭಿಮಾನಿಗಳು ಖುಷಿಯಾಗಿ ಕಾಮೆಂಟ್ ಮಾಡಿದ್ದಾರೆ.
‘ಇದುವರೆಗಿನ ಅದ್ಭುತ ಫೋಟೋ’ ಎಂದು ಕೆಲವರು ಬಣ್ಣಿಸಿದರೆ ಇನ್ನು ಕೆಲವರು ಐಸಿಸಿಗೆ ಧೋನಿ ಚಿತ್ರ ಬಳಸಿದ್ದಕ್ಕೆ ಅಭಿನಂದಿಸಿದ್ದಾರೆ. ಧೋನಿ ಪ್ರತಿನಿಧಿಸುವ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ನಮ್ಮ ತಲಾ ಫೋಟೋ ಐಸಿಸಿ ಟ್ವಿಟರ್ ಕವರ್ ನಲ್ಲಿ ಎಂದು ಖುಷಿಯಿಂದ ಟ್ವೀಟ್ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ