Publish Date: Tue, 22 Jan 2019 (10:39 IST)
Updated Date: Tue, 22 Jan 2019 (10:40 IST)
ಬೆಂಗಳೂರು: ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿ ಟೀಂ ಇಂಡಿಯಾದಿಂದ ನಿಷೇಧಕ್ಕೊಳಗಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಬಗ್ಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಪ್ರಶ್ನೆ ಎದುರಾದಾಗ ದ್ರಾವಿಡ್ ಈ ಇಬ್ಬರು ಕ್ರಿಕೆಟಿಗರ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯವೇನೆಂದು ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ಅತಿಯಾಗಿ ಪ್ರತಿಕ್ರಿಯಿಸುವುದು ಬೇಡ ಎಂದೂ ದ್ರಾವಿಡ್ ಸಲಹೆ ನೀಡಿದ್ದಾರೆ.
‘ಆಟಗಾರರು ಹಿಂದೆಂದೂ ತಪ್ಪು ಮಾಡಿಲ್ಲ ಎಂದಲ್ಲ. ಮುಂದೆಯೂ ತಪ್ಪು ಮಾಡಲ್ಲ ಎಂದಲ್ಲ. ಆದರೆ ಯುವ ಆಟಗಾರರಿಗೆ ನಾವು ತಿಳುವಳಿಕೆ ನೀಡಬೇಕು. ದಯವಿಟ್ಟು ಪ್ರಕರಣದ ಬಗ್ಗೆ ಅತಿಯಾಗಿ ಮಾತನಾಡಬೇಡಿ’ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ