Publish Date: Tue, 22 Jan 2019 (10:20 IST)
Updated Date: Tue, 22 Jan 2019 (10:22 IST)
ಮುಂಬೈ: 2008 ರ ಐಪಿಎಲ್ ಪಂದ್ಯಾವಳಿ ವೇಳೆ ಸಿಟ್ಟಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯರಾಗಿದ್ದ ವೇಗಿ ಶ್ರೀಶಾಂತ್ ಗೆ ಕಪಾಳ ಮೋಕ್ಷ ಮಾಡಿದ ಪ್ರಕರಣದ ಬಗ್ಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಈಗ ತಪ್ಪೊಪ್ಪಿಕೊಂಡಿದ್ದಾರೆ.
ಅಂದು ನಾನು ತಪ್ಪು ಮಾಡಿದೆ. ನಾನು ಹಾಗೆ ಮಾಡಬಾರದಿತ್ತು ಎಂದು ಮುಂಬೈ ಇಂಡಿಯನ್ಸ್ ಆಟಗಾರನಾಗಿದ್ದ ಭಜಿ ತಪ್ಪೊಪ್ಪಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಜಿ ‘ಒಂದು ವೇಳೆ ನನಗೆ ಜೀವನವನ್ನು ಮತ್ತೆ ರಿವೈಂಡ್ ಮಾಡಿ ಯಾವುದಾದರೂ ತಪ್ಪು ಸರಿಪಡಿಸಬೇಕೆಂದಿದ್ದರೆ ಆ ಘಟನೆಯಲ್ಲಿ ಹಾಗೆ ಮಾಡದೇ ಇರುತ್ತಿದ್ದೆ. ಆವತ್ತು ನಾನು ತಪ್ಪು ಮಾಡಿದೆ. ಈಗಲೂ ಜನ ಆ ಘಟನೆ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ’ ಎಂದು ಭಜಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ