ಎಲ್ಲರೂ ಇದ್ದಾಗಲೇ ಚಿನ್ನಾಭರಣ ಕಳವು: ಮನೆ ಮಂದಿಗೆ ಶಾಕ್

ಶುಕ್ರವಾರ, 26 ಏಪ್ರಿಲ್ 2019 (15:30 IST)
ಮನೆ ಬೀಗ ಒಡೆದು ಕಳ್ಳತನ ಮಾಡಲಾಗಿದೆ ಎಂದು ನಾವೆಲ್ಲ ಕೇಳಿರ್ತೇವೆ. ಓದಿರ್ತೇವೆ. ಆದರೆ ಮನೆ ಮಂದಿ ಇದ್ದಾಗಲೇ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ನಡೆದಿದೆ.

ಶಿರ್ವ ಠಾಣೆಯ ವ್ಯಾಪ್ತಿಯ ಶಂಕರಪುರದ ಕುರ್ಕಾಲು ಐರಿನ್ ಅವರ ಮನೆಯಲ್ಲಿ 40 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ.
ಮನೆಯವರು ಮನೆಯಲ್ಲಿ ಇರುವಾಗಲೇ ಕಳ್ಳತನ ಆಗಿದೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಮನೆಯಲ್ಲಿ ಗಂಡ ಹೆಂಡತಿ ಮಗ ಮತ್ತು ಕೆಲಸದಾಕೆ ಇರುವಾಗಲೇ ಘಟನೆ ನಡೆದಿದೆ.

ಐರಿನ್ ನಿವೃತ್ತ ಶಿಕ್ಷಕಿ  ಗಂಡ ಮತ್ತು ಮಗ ಶಂಕರಪುರದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮುದ್ದು ಮಕ್ಕಳ ಆಹಾರಕ್ಕೆ ಕನ್ನ