Publish Date: Fri, 03 May 2019 (06:09 IST)
Updated Date: Fri, 03 May 2019 (06:11 IST)
ಮುಂಬೈ: ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಎದುರಾಳಿಯನ್ನು ಸ್ಟಂಪ್ ಔಟ್ ಮಾಡುವ ಮಿಂಚಿನ ಕೀಪರ್ ಧೋನಿ. ಅವರ ಗ್ಲೌಸ್ ಮ್ಯಾಜಿಕ್ ಬಗ್ಗೆ ಈಗ ಟ್ವಿಟರಿಗರು ಕೊಂಡಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್ ಮೋರಿಸ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಮಿಂಚಿನಂತೇ ಸ್ಟಂಪ್ ಔಟ್ ಮಾಡಿದ ಬಳಿಕ ಟ್ವಿಟರಿಗರೊಬ್ಬರು ಧೋನಿಯ ಗ್ಲೌಸ್ ಬುಲೆಟ್ ಟ್ರೈನ್ ನ ಲೋಗೋ ಆಗಬೇಕು ಎಂದು ಪ್ರೀತಿಯಿಂದ ಆಗ್ರಹಿಸಿದ್ದಾರೆ!
ಇನ್ನು, ಕೆಲವರು ಧೋನಿಯನ್ನು ಕೇಂದ್ರ ಸರ್ಕಾರ ಹವಾಮಾನ ತಜ್ಞನಾಗಿ ನೇಮಿಸಬೇಕು. ಯಾಕೆಂದರೆ ಭವಿಷ್ಯವನ್ನು ಅವರಷ್ಟು ಕರೆಕ್ಟಾಗಿ ಊಹಿಸುವವರು ಯಾರೂ ಇಲ್ಲ ಎಂದು ಹೊಗಳಿದ್ದಾರೆ. ಅಂತೂ ಧೋನಿ ಗ್ಲೌಸ್ ನಿಂದ ಮ್ಯಾಜಿಕ್ ಮಾಡುತ್ತಿರುವುದಕ್ಕೆ ಟ್ವಿಟರಿಗರು ಮನಸೋತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ