Select Your Language

Notifications

webdunia
webdunia
webdunia
Sunday, 13 April 2025
webdunia

ಐಪಿಎಲ್ ನ ವಿದೇಶೀ ಕೋಚ್ ಗಳಿಂದ ಟೀಂ ಇಂಡಿಯಾ ಮಾಹಿತಿ ಸೋರಿಕೆ?!

ಐಪಿಎಲ್
ಮುಂಬೈ , ಶುಕ್ರವಾರ, 3 ಮೇ 2019 (06:19 IST)
ಮುಂಬೈ: ಐಪಿಎಲ್ ನ ವಿವಿಧ ತಂಡಗಳಿಗೆ ಕೆಲಸ ಮಾಡುವ ವಿದೇಶೀ ಕೋಚ್ ಗಳಿಂದ ಟೀಂ ಇಂಡಿಯಾಕ್ಕೆ ಕುತ್ತು ಬರುತ್ತಿದೆಯೇ? ಹೀಗಂತ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇದೀಗ ಅಸಮಾಧಾನಗೊಂಡಿದೆ ಎನ್ನಲಾಗಿದೆ.


ಡೆಲ್ಲಿ ಕೋಚ್ ಆಗಿರುವ ಪಾಂಟಿಂಗ್ ಆಸ್ಟ್ರೇಲಿಯಾದ ವಿಶ್ವಕಪ್ ತಂಡದ ಸಹಾಯಕ ಕೋಚ್ ಕೂಡಾ. ಡೆಲ್ಲಿ ಪರ ಐಪಿಎಲ್ ನಲ್ಲಿ ಕೋಚಿಂಗ್ ಮಾಡುತ್ತಿರುವ ಪಾಂಟಿಂಗ್ ಗೆ ಟೀಂ ಇಂಡಿಯಾದ ವಿಶ್ವಕಪ್ ತಂಡದಲ್ಲಿರುವ ಆಟಗಾರ ಶಿಖರ್ ಧವನ್ ಹುಳುಕು, ಸಾಮರ್ಥ್ಯ ಎಲ್ಲವೂ ಚೆನ್ನಾಗಿ ಗೊತ್ತಿರುತ್ತದೆ. ಇದು ವಿಶ್ವಕಪ್ ನಲ್ಲಿ ಧವನ್ ರನ್ನು ಕಟ್ಟಿ ಹಾಕಲು ಆಸ್ಟ್ರೇಲಿಯಾಕ್ಕೆ ಸುಲಭವಾಗುತ್ತದೆ.

ಇತ್ತ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕೆಲಸ ಮಾಡುತ್ತಿರುವ ಪ್ರಸನ್ನ ಅಗೋರಾಂಗೆ ಕೆಎಲ್ ರಾಹುಲ್, ಮೊಹಮ್ಮದ್ ಶಮಿ ಅವರಂತಹ ಪ್ರಮುಖ ಆಟಗಾರರ ಬಂಡವಾಳವೆಲ್ಲಾ ಗೊತ್ತಾಗುತ್ತದೆ. ಇದು ಟೀಂ ಇಂಡಿಯಾದ ವಿಶ್ವಕಪ್ ಕನಸಿಗೆ ಕುತ್ತು ತರಲಿದೆ ಎಂದು ಟೀಂ ಇಂಡಿಯಾ ಮೂಲಗಳು ಅಸಮಾಧಾನಗೊಂಡಿವೆ ಎಂದು ಕೆಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮಿಂಚಿನ ಸ್ಟಂಪಿಂಗ್ ಹಿಂದಿನ ರಹಸ್ಯ ಬಯಲು ಮಾಡಿದ ಧೋನಿ