Select Your Language

Notifications

webdunia
webdunia
webdunia
webdunia

ಇನ್ನು ಮುಂದೆ ಈ ಆಧಾರ್ ಕಾರ್ಡ್ ಮಾನ್ಯವಾಗುವುದಿಲ್ಲ

ಇನ್ನು ಮುಂದೆ ಈ ಆಧಾರ್ ಕಾರ್ಡ್ ಮಾನ್ಯವಾಗುವುದಿಲ್ಲ
ಬೆಂಗಳೂರು , ಬುಧವಾರ, 1 ಮೇ 2019 (06:29 IST)
ಬೆಂಗಳೂರು : ಪ್ಲಾಸ್ಟಿಕ್ ಆಧಾರ್, ಆಧಾರ್ ಸ್ಮಾರ್ಟ್ ಕಾರ್ಡ್ ಹಾಗೂ ಪಿವಿಸಿ ಕಾರ್ಡ್ ಮಾನ್ಯವಾಗುವುದಿಲ್ಲವೆಂದು ಯುಐಡಿಎಐ ತನ್ನ ಅಧಿಕೃತ ಟ್ವೀಟರ್ ನಲ್ಲಿ ಸೂಚನೆ ನೀಡಿದೆ.


 
ಹೌದು. ಈ ಕಾರ್ಡ್ ಗಳಿಂದ ಆಧಾರ್ ವಿವರಗಳ ಗೌಪ್ಯತೆಗೆ ಅಪಾಯವಿದೆ. ಅಲ್ಲದೇ ಅನೇಕ ಬಾರಿ ನಿಮ್ಮ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಕೆಲಸ ಮಾಡುವುದಿಲ್ಲ. ಅನಧಿಕೃತ ಮುದ್ರಣದಿಂದ ಕ್ಯೂಆರ್ ಕೋಡ್ ಸಂಪರ್ಕ ಕಡಿತಗೊಳ್ಳುತ್ತದೆ. ಆಗ ಆಧಾರ್ ವಿವರ ಸೋರಿಕೆಯಾಗುತ್ತದೆ. ಆದಕಾರಣ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅಥವಾ ಆಧಾರ್ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಬೇಡಿ ಎಂದು ಯುಐಡಿಎಐ ತಿಳಿಸಿದೆ.


 

ಅಲ್ಲದೇ ಪ್ಲಾಸ್ಟಿಕ್ ಆಧಾರ್ ಕಾರ್ಡ್ ರೆಡಿ ಮಾಡಲು 50 ರೂಪಾಯಿ ಬದಲು 300 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಹಾಗಾಗಿ ಒಂದು ಖಾಲಿ ಹಾಳೆಯಲ್ಲಿ ಮುದ್ರಣಗೊಂಡ ಆಧಾರ್ ಮಾನ್ಯವಾಗುತ್ತದೆ. ಕಲರ್ ಪ್ರಿಂಟಿಂಗ್ ಅಗತ್ಯವೂ ಇಲ್ಲವೆಂದು ಯುಐಡಿಎಐ ಹೇಳಿದೆ. ಹಾಗೇ ನಿಮ್ಮ ಆಧಾರ್ ಕಾರ್ಡ್ ಕಳೆದಿದ್ದರೆ https://eaadhaar.uidai.gov.in ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

SSLC ಫಲಿತಾಂಶ; ಯಾವ ಜಿಲ್ಲೆಗೆ ಯಾವ ಸ್ಥಾನ?