Publish Date: Wed, 01 May 2019 (06:26 IST)
Updated Date: Wed, 01 May 2019 (06:28 IST)
ಬೆಂಗಳೂರು : ತ್ವಚೆಯ ಮಾಯಿಶ್ಚರೈಸರ್ ಕಾಪಾಡಲು ಹಲವು ಬಗೆಯ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುತ್ತೇವೆ. ಆದರೆ ಇವುಗಳು ಮುಖದ ಮಾಯಿಶ್ಚರೈಸರ್ ಕಾಪಾಡುವ ಬದಲು ಹಾಳು ಮಾಡುವುದೇ ಹೆಚ್ಚು. ಅದರಬದಲು ನ್ಯಾಚುರಲ್ ಆದ ಈ ಎಣ್ಣೆಯನ್ನು ಬಳಸಿ.
ಹೌದು. ಯಾವ ಮಾಯಿಶ್ಚರೈಸರ್ ಕ್ರೀಂ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ. ಇದು ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಒಣ ತ್ವಚೆ ಇರುವವರು ಪ್ರತಿದಿನ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.
ಹಾಗೇ ತೆಂಗಿನೆಣ್ಣೆಯನ್ನು ಹಚ್ಚಿ ಮುಖಕ್ಕೆ ಹಚ್ಚಿದ ಮೇಕಪ್ ನ್ನು ಸುಲಭವಾಗಿ ತೆಗೆಯಬಹುದು. ಅಲ್ಲದೇ ಇದು ಮೇಕಪ್ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯುತ್ತದೆ. ತೆಂಗಿನೆಣ್ಣೆ ಮುಖದಲ್ಲಿ ಮೊಡವೆ ಬರುವುದನ್ನು ತಡೆಯುತ್ತದೆ ಹಾಗೂ ತ್ವಚೆಯನ್ನು ಕೋಮಲವಾಗಿ ಇಡುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.