Select Your Language

Notifications

webdunia
webdunia
webdunia
webdunia

ಮೀನು ಹಾಗೂ ಹಾಲನ್ನು ಜೊತೆಯಾಗಿ ಸೇವಿಸಿದವರ ದೇಹದಲ್ಲಿ ಬಿಳಿ ಮಚ್ಚೆಗಳು ಮೂಡುತ್ತದೆಯೇ?

ಮೀನು ಹಾಗೂ ಹಾಲನ್ನು ಜೊತೆಯಾಗಿ ಸೇವಿಸಿದವರ ದೇಹದಲ್ಲಿ ಬಿಳಿ ಮಚ್ಚೆಗಳು ಮೂಡುತ್ತದೆಯೇ?
ಬೆಂಗಳೂರು , ಸೋಮವಾರ, 29 ಏಪ್ರಿಲ್ 2019 (06:34 IST)
ಬೆಂಗಳೂರು : ಮೀನಿನ ಊಟ ಮಾಡಿದ ನಂತರ ಹಾಲು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಚರ್ಮದ ಮೇಲೆ ಬಿಳಿ ಮಚ್ಚೆಗಳು ಮೂಡುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ ಈ ವಿಚಾರ ನಿಜವೇ?ಸುಳ್ಳೇ? ಎಂಬ ಗೊಂದಲ ಹಲವರಲಿದೆ. ಆದ್ದರಿಂದ ಈ ವಿಚಾರ ಎಷ್ಟು ನಿಜ ಎಂಬುದನ್ನು ತಿಳಿಯೋಣ.


ಆಯುರ್ವೇದದ ಪ್ರಕಾರ, ಸಸ್ಯಾಹಾರ ಮತ್ತು ಮಾಂಸಾಹಾರದ ಈ ಬಗೆಯ ಮಿಶ್ರಣವನ್ನು ಸೇವಿಸಬಾರದು. ಮೀನು ಅಪ್ಪಟ ಮಾಂಸಾಹಾರಿ ಹಾಗೂ ಹಾಲು ಸಸ್ಯಾಹಾರಿಯಾಗಿದೆ. ಹಾಗಾಗಿ ಇವೆರಡನ್ನೂ ಜೊತೆಯಾಗಿ ಸೇವಿಸಿದರೆ ಇದು ದೇಹದಲ್ಲಿ "ತಾಮಸ ಗುಣ"ವನ್ನು ಹೆಚ್ಚಿಸುತ್ತದೆ ಹಾಗೂ ಇದರಿಂದ ದೇಹದ ಸಮತೋಲನ ಏರುಪೇರಾಗುತ್ತದೆ.


ವಿಜ್ಞಾನದ ಪ್ರಕಾರ ಮೀನು ಮತ್ತು ಡೈರಿ ಉತ್ಪನ್ನಗಳನ್ನು ಜೊತೆಯಾಗಿ ಸೇವಿಸುವುದರಿಂದ ಯಾವುದೇ ಹಾನಿಯಿಲ್ಲ. ಅಲ್ಲದೇ ಹಲವಾರು ರುಚಿಕರ ಮೀನಿನ ಖಾದ್ಯಗಳನ್ನು ತಯಾರಿಸುವಾಗ  ಡೈರಿ ಉತ್ಪನ್ನಗಳನ್ನು ಬಳಸಲಾಗುತ್ತದೆ. ಈ ಖಾದ್ಯವನ್ನು ಸೇವಿಸಿದ ಕೆಲವರಿಗೆ ಮಾತ್ರ ಅಜೀರ್ಣತೆಯನ್ನು ಉಂಟುಮಾಡಬಹುದು. ಆದರೆ ಈ ಬಿಳಿಯ ಮಚ್ಚೆಗಳಲ್ಲ ಎನ್ನಲಾಗಿದೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಆಂಟಿ ನನ್ನನ್ನು ಯೂಸ್ ಮಾಡ್ಕೋ ಅಂತಿದ್ದಾಳೆ