ಚಿನ್ನ ಖರೀದಿಸುವವರಿಗೊಂದು ಸಿಹಿಸುದ್ದಿ; ಪೇಟಿಎಂನಲ್ಲಿ 1ರೂಪಾಯಿಗೆ ಸಿಗಲಿದೆ ಚಿನ್ನ

ಸೋಮವಾರ, 6 ಮೇ 2019 (08:29 IST)
ಬೆಂಗಳೂರು : ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ನಮ್ಮಲಿದೆ. ಆದರೆ ಚಿನ್ನದ ಬೆಲೆ ಗಗನಕ್ಕೇರಿದ ಹಿನ್ನಲೆಯಲ್ಲಿ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ಚಿನ್ನ ಕೈಗೆಟ್ಟುಕದಂತಾಗಿದೆ. ಆದ್ದರಿಂದ ಇ-ವಾಲೆಟ್ ಪೇಟಿಎಂ ಒಂದು ರೂಪಾಯಿಗೆ ಬಂಗಾರ ಖರೀದಿ ಮಾಡುವಂತಹ ಅವಕಾಶವನ್ನು ಕಲ್ಪಿಸಿದೆ.
ಹೌದು. ಪೇಟಿಎಂ ಈಗಾಗಲೇ ಗೋಲ್ಡ್ ಸೇವೆ ಶುರು ಮಾಡಿದೆ. ಇದರಲ್ಲಿ ಒಂದು ರೂಪಾಯಿಯಿಂದ 1.5 ಲಕ್ಷ ರೂಪಾಯಿ ಮೌಲ್ಯದವರೆಗೆ ಬಂಗಾರ ಖರೀದಿ ಮಾಡಬಹುದು. ಇಲ್ಲಿ 1, 2, 5, 10, 20 ಗ್ರಾಂ ಬಂಗಾರದ ನಾಣ್ಯದ ರೂಪದಲ್ಲಿ ಚಿನ್ನ ಸಿಗಲಿದೆ.  ಅಲ್ಲದೇ ಈ 24 ಕ್ಯಾರೆಟ್ ನ 999.9 ಶುದ್ಧವಾಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಅಲ್ಲದೇ ಇಲ್ಲಿ  ಖರೀದಿಸಿದ ಬಂಗಾರವನ್ನು ಸುರಕ್ಷಿತ ಲಾಕರ್ ನಲ್ಲಿ ಇಡಬಹುದು ಇಲ್ಲವಾದರೆ  ಮನೆಗೆ ಕೂಡ ತರಬಹುದಾಗಿದೆ.


ಪೇಟಿಎಂನಲ್ಲಿ ಬಂಗಾರ ಖರೀದಿ ಮಾಡಲು ನೀವು ಪೇಟಿಎಂ ಆಪ್ ನ ಗೋಲ್ಡ್ ಆಯ್ಕೆ ಕ್ಲಿಕ್ ಮಾಡಬೇಕು. ಇಲ್ಲಿ ನೀವು ಚಿನ್ನ ಖರೀದಿಸುವುದರ ಜೊತೆಗೆ ಮಾರಾಟ ಕೂಡ ಮಾಡಬಹುದು. ಹಾಗೇ ಬಂಗಾರವನ್ನು ಡಿಲೆವರಿ ಪಡೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 60 ವರ್ಷಗಳಿಂದ ಕಾಂಗ್ರೆಸ್ ನವರು ಪ್ರಾಕ್ಟೀಸ್ ಮ್ಯಾಚ್ ಆಡ್ತಾ ಇದ್ರಾ?!