Select Your Language

Notifications

webdunia
webdunia
webdunia
webdunia

ರಾಶಿಗನುಗುಣವಾಗಿ ಈ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಬದಲಾಗುತ್ತೆ ನಿಮ್ಮ ಅದೃಷ್ಟ

ರಾಶಿಗನುಗುಣವಾಗಿ ಈ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಬದಲಾಗುತ್ತೆ ನಿಮ್ಮ ಅದೃಷ್ಟ
ಬೆಂಗಳೂರು , ಶುಕ್ರವಾರ, 3 ಮೇ 2019 (07:10 IST)
ಬೆಂಗಳೂರು : ಪರ್ಸ್ ಇರುವುದೇ ಹಣವನ್ನು ಇಟ್ಟುಕೊಳ್ಳಲು. ಆದರೆ ಈ ಪರ್ಸ್ ನಲ್ಲಿ ಯಾವಾಗಲೂ ಹಣ ತುಂಬಿಕೊಂಡಿರಬೇಕೆಂದರೆ  ಪರ್ಸ್ ನಲ್ಲಿ ನಿಮ್ಮ ರಾಶಿಗನುಗುಣವಾಗಿ ನಾಣ್ಯಗಳನ್ನು ಇಟ್ಟುಕೊಂಡಿರಬೇಕು. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಆ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ.




ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.

ವೃಷಭ : ಈ ರಾಶಿಯವರು ಸದಾ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಟ್ಟಿರಬೇಕು.

ಮಿಥುನ : ಮಿಥುನ ರಾಶಿಯವರು ಪರ್ಸ್ ನಲ್ಲಿ ಯಾವಾಗ್ಲೂ ಕಂಚಿನ ನಾಣ್ಯವನ್ನು ಇಟ್ಟುಕೊಳ್ಳುವುದು ಶುಭ.

ಕರ್ಕ : ಈ ರಾಶಿಯವರು ಬೆಳ್ಳಿ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಮಂಗಳಕರ.

ಸಿಂಹ : ಈ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ಅಥವಾ ಕಂಚಿನ ನಾಣ್ಯಗಳಲ್ಲಿ ಒಂದನ್ನು ಇಟ್ಟುಕೊಳ್ಳಬಹುದು.

ಕನ್ಯಾ : ಕನ್ಯಾ ರಾಶಿಯವರು ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನು ಇಡಬೇಕು.

ತುಲಾ : ಈ ರಾಶಿಯವರು ಕೂಡ ಪರ್ಸ್ ನಲ್ಲಿ ಬೆಳ್ಳಿ ನಾಣ್ಯವನ್ನಿಟ್ಟುಕೊಂಡರೆ ಶುಭಕರ.

ವೃಶ್ಚಿಕ : ಇವ್ರು ಸದಾ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು.

ಧನು : ಈ ರಾಶಿಯವರು ಪರ್ಸ್ ನಲ್ಲಿ ಕಂಚಿನ ನಾಣ್ಯವನ್ನು ಇಡಬೇಕು.

ಮಕರ : ಕಬ್ಬಿಣದ ನಾಣ್ಯವನ್ನು ಪರ್ಸ್ ನಲ್ಲಿಟ್ಟುಕೊಂಡರೆ ಶುಭಕರ.

ಕುಂಭ : ಕಂಚಿನ ನಾಣ್ಯ ಪರ್ಸ್ ನಲ್ಲಿದ್ದರೆ ಮಂಗಳಕರ.

ಮೀನ : ಮೀನ ರಾಶಿಯವರ ಪರ್ಸ್ ನಲ್ಲಿ ಸದಾ ಚಿನ್ನದ ಅಥವಾ ಹಿತ್ತಾಳೆಯ ನಾಣ್ಯವಿರಬೇಕು


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ದೇವಿ ಯಾಕೆ ಸದಾ ಪತಿ ಶ್ರೀಮನ್ನಾರಾಯಣನ ಪಾದ ಒತ್ತುತ್ತಾಳೆ?