Publish Date: Fri, 03 May 2019 (06:06 IST)
Updated Date: Fri, 03 May 2019 (06:08 IST)
ಬೆಂಗಳೂರು: ಲಕ್ಷ್ಮೀ ದೇವಿ ಶ್ರೀಮನ್ನಾರಾಯಣನ ಪಾದವನ್ನು ಒತ್ತುವ ಹಲವು ಚಿತ್ರಗಳನ್ನು ನಾವು ನೋಡಿರುತ್ತೇವೆ. ಸ್ವತಃ ಧನ ಕನಕಗಳಿಗೆ ಅಧಿಪತಿಯಾಗಿರುವ ಲಕ್ಷ್ಮಿ ಯಾಕೆ ಪತಿಯ ಕಾಲುಗಳನ್ನು ಸದಾ ಒತ್ತುತ್ತಾಳೆ ಗೊತ್ತೇ?
ಒಬ್ಬ ಪುರುಷನ ಕಾಲಿನಲ್ಲಿ ದಾನವ ಗುರುಗಳಾದ ಶುಕ್ರನು ವಾಸವಾಗಿರುತ್ತಾನೆ. ಸ್ತ್ರೀಯ ಕೈಯಲ್ಲಿ ದೇವ ಗುರು ಬೃಹಸ್ಪತಿಯ ವಾಸವಿರುತ್ತದೆ. ಸ್ತ್ರೀ ತನ್ನ ಪತಿಯ ಕಾಲು ಒತ್ತುವುದರಿಂದ ದೇವ, ದಾನವ ಗುರುಗಳ ಸಮ್ಮಿಲನವಾಗುತ್ತದೆ.
ಈ ಗುರು ಶುಕ್ರರ ಭೇಟಿಯಿಂದ ಧನ ಲಾಭದ ಯೋಗವಾಗುತ್ತದೆ. ಆದ್ದರಿಂದ ಲಕ್ಷ್ಮೀ ದೇವಿ ಸದಾ ಪತಿಯ ಪಾದಗಳನ್ನು ಒತ್ತುತ್ತಿರುತ್ತಾಳಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ